ಹುಬ್ಬಳ್ಳಿ – ಕಿರಾತಕ ಪತಿ
ಪತ್ನಿಯ ಶೀಲ ಶಂಕಿಸಿ ಪತ್ನಿಯನ್ನ ಕೊಲ್ಲಲು ಆ್ಯಕ್ಸಿಡೆಂಟ್ ಫ್ಲ್ಯಾನ್ ಮಾಡಿ ಪತ್ನಿಯ ಮೇಲೆ ಆಟೋ ಹತ್ತಿಸಿ ಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ಹುಬ್ಬಳ್ಳಿಯ ಹೊಸುರು ವೃತ್ತದ ಬಳಿ ಅಪಘಾತ ಮಾಡಿ ಪತ್ನಿಯನ್ನ ಕೊಲ್ಲಲು ಯತ್ನಿಸಿದ್ದ. ಕೇಶ್ವಾಪೂರದ ಅಜತ್ ಕಾಲೋನಿ ನಿವಾಸಿಯಾ ರಾಘವೇಂದ್ರ ಎಂಬುವರು ಪತ್ನಿ ಗೀತಾಳನ್ನು ಕೊಲೆ ಮಾಡಲು ಯತ್ನಿಸಿದ ಎನ್ನಲಾಗುತ್ತಿದೆ. ರಾಘವೇಂದ್ರ ಹಾಗೂ ಗೀತಾ ದಂಪತಿ ಸಂಸಾರದಲ್ಲಿ ಕಳೆದ ಕೆಲ ತಿಂಗಳಿಂದ ಕಲಹ ನಡೆದಿತ್ತು. ಹೆಂಡತಿ ನಡತೆ ಬಗ್ಗೆ ಅನುಮಾನ ಪಟ್ಟ ರಾಘವೇಂದ್ರ ಹೆಂಡತಿಯನ್ನು ಕೊಲ್ಲಲು ಮಾಸ್ಟರ್ ಫ್ಲ್ಯಾನ್ ಮಾಡಿದ್ದಾನೆ .
ಪತ್ನಿ ಗೀತಾ ಸ್ಕೂಟಿಗೆ ಆಟೋಯಿಂದ ಡಿಕ್ಕಿಹೊಡೆಸಿ ಕೊಲೆಗೆ ಯತ್ನಿಸಿದ್ದ. ಮನೆಯಲ್ಲಿ ಅವಾಗವಾಗ ಇಬ್ಬರ ಮಧ್ಯೆ ಕಲಹ ಉಂಟಾಗುತ್ತಿತ್ತು ಇದರಿಂದ ಪತ್ನಿ ಪೊಲೀಸರಿಗೆ ದೂರು ಕೂಡು ನೀಡಿದ್ದರು. ಇದನ್ನು ತಿಳಿದ ಪತಿರಾಯ ಪತ್ನಿಯನ್ನು ಕೊಲ್ಲಲ್ಲು ಸ್ಕೆಚ್ ಹಾಕಿದ್ದ. ಕಳೆದ ಶುಕ್ರವಾರ ತಂಗಿಯ ಜೊತೆ ಸ್ಕೂಟಿ ಮೇಲೆ ತೆರಳುತ್ತಿದ್ದಾಗ, ಆಟೋದಿಂದ ಡಿಕ್ಕಿ ಹೊಡೆದು ಹತ್ಯ ಮಾಡಲು ಯತ್ನಿಸಿದ್ದಾನೆ. ಡಿಕ್ಕಿಯ ರಭಸಕ್ಕೆ ಪತ್ನಿಗೆ ತಲೆ, ಮುಖ ಹಾಗೂ ಬಲಗೈಗೆ ಗಂಭೀರ ಗಾಯವಾಗಿದ್ದು ಈಗ ಪತ್ನಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.