ಟೊರಾಂಟೋ ರೆಸ್ಟೋರೆಂಟ್ ನಲ್ಲಿ ಶೂಟೌಟ್: ಇಬ್ಬರು ಸಾವು

ಟೊರಾಂಟೋ:ಜು-23: ಅಮೆರಿಕದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ನಡೆದಿದ್ದು, ದುಷ್ಕರ್ಮಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ ನಡೆದಿದ್ದು, ರಾತ್ರಿ 10 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಯೋರ್ವ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಬಳಿಕ ದಾಳಿಕೋರನೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

.

Toronto shooting,2 dead,14 hurt as gunman fires

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ