ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ

Varta Mitra News

ಮೈಸೂರು,ಜು.22-ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ ಕಳ್ಳನೊಬ್ಬ ಯುವತಿಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಕೆ.ಆರ್. ಆಸ್ಪತ್ರೆಯ ಮೂರನೇ ಹಂತಸ್ತಿನ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿದ ಸೈಕೊ ಕಳ್ಳನೊಬ್ಬ ಯುವತಿಯರು ಒಣ ಹಾಕಿರುವ ಬಟ್ಟೆಗಳನ್ನು ಎತ್ತಿಕೊಂಡು ಹೋಗುತ್ತಿದ್ದನು. ಇದನ್ನು ಕಂಡ ವಿದ್ಯಾರ್ಥಿನಿಯೊಬ್ಬಳು ಕಿರುಚಿಕೊಂಡಿದ್ದಾಳೆ. ತಕ್ಷಣವೇ ಕೊಠಡಿಯಲ್ಲಿದ್ದ ಎಲ್ಲ ವಿದ್ಯಾರ್ಥಿನಿಯರು ಹೊರಬಂದಿದ್ದಾರೆ. ಈ ವೇಳೆ ಸೈಕೋ ಕಳ್ಳನು ವಿದ್ಯಾರ್ಥಿನಿಯ ಕತ್ತು ಹಿಸುಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಕೊಠಡಿಯಲ್ಲಿದ್ದ ವಿದ್ಯಾರ್ಥಿನಿಯ ಮೊಬೈಲ್‍ನ್ನು ಕದ್ದು ಪರಾರಿಯಾಗಿದ್ದಾನೆ.
ಯುವತಿಯರ ಬಟ್ಟೆ ಕದಿಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖಾಕಿ ಬಟ್ಟೆ ಧರಿಸಿದ್ದ ಈತ ಸೆಕ್ಯುರಿಟಿ ಗಾರ್ಡ್‍ನ ಟೋಪಿಯನ್ನು ಹಾಕಿಕೊಂಡಿದ್ದು , ಕಾಂಪೌಂಡ್ ಹಾರಿ ಒಳನುಗ್ಗಿರುವುದು ತಿಳಿದುಬಂದಿದೆ.
ಈ ಬಗ್ಗೆ ಆಡಳಿತ ಮಂಡಳಿ ದೇವರಾಜ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಈತನಿಗಾಗಿ ಹುಡುಗಾಟ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ