
ಚಿತ್ರದುರ್ಗ, ಜು.22- ತರಕಾರಿ ಮಾರುಕಟ್ಟೆಗೆ ತೆರಳುತ್ತಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಇಲ್ಲಿನ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಬುಡ್ನಹಟ್ಟಿ ಗ್ರಾಮದ ಸೈಯದ್ ಇಮಾಮ್ (58) ಮೃತಪಟ್ಟವರು. ಚಳ್ಳಕೆರೆಯಲ್ಲಿ ನಡೆಯುವ ಸಂತೆಗೆ ಬುಡ್ನಹಟ್ಟಿಯಿಂದ ತರಕಾರಿ ಕೊಂಡೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆಟೋದಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಪೆ ಆಟೋ ರಿಕ್ಷಾದಲ್ಲಿ ಸಾಮಥ್ರ್ಯಕ್ಕಿಂತಲೂ ಹೆಚ್ಚಿನ ಸರಕು ಮತ್ತು ಪ್ರಯಾಣಿಕರನ್ನು ಹೊತ್ತೊಯ್ಯಲಾಗುತ್ತಿತ್ತು, ಇದರಿಂದ ಆಟೋ ನಿಯಂತ್ರಣ ತಪ್ಪಿ ಉರುಳಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.