ನಟಿ ಜೂಹಿ ಜತೆ ಮದುವೆಗೆ ರೆಡಿಯಾಗಿದ್ದ ಸಲ್ಲು… ಆದರೆ, ತಡೆದಿದ್ದು ಯಾರು?

ಹಾಗೆ ನೋಡಿದ್ರೆ ಈಗಾಗಲೇ ಸಲ್ಲು ಮದುವೆಯಾಗಿ ಒಂದೆರಡು ಮಕ್ಕಳಿಗೆ ತಂದೆ ಕೂಡ ಆಗುತ್ತಿದ್ದರೇನೊ. ಆದರೆ, ಅದೇನು ಬ್ಯಾಡ್​ ಲಕ್ಕೊ ಗೊತ್ತಿಲ್ಲ. ಸಲ್ಲುಗೆ ಕಂಕಣ ಭಾಗ್ಯ ಕೂಡಿ ಬರಲಿಲ್ಲ.

ಇನ್ನು ಭಾಯ್​ಜಾನ್​ ಲವ್​, ಅಫೇರ್​ಗಳಿಂದ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಬಿಟೌನ್​ನ ಕೆಲ ನಟಿಯರ ಜತೆ ಇವರ ಹೆಸರು ತಳುಕು ಹಾಕಿಕೊಂಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ವಿಷ್ಯಾ ಏನಪ್ಪಾ ಅಂದ್ರೆ ನಟಿ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಸಲ್ಲು ಮುಂದಾಗಿದ್ದರಂತೆ. ಜೂಹಿ ಅವರ ತಂದೆ ಜತೆ ಮಾತನಾಡಿದ್ದ ಸಲ್ಲು, ನಾವು ಮದುವೆಯಾಗುತ್ತೇವೆ ಎಂದು ಹೇಳಿದ್ದರಂತೆ. ಆದರೆ, ಇದಕ್ಕೆ ಜೂಹಿ ಮನೆಯಲ್ಲಿ ಒಪ್ಪಲಿಲ್ಲವಂತೆ. ನಿಮ್ಮಿಬ್ಬರ ಜೋಡಿ ಸರಿಹೊಂದುವುದಿಲ್ಲ ಎಂದು ಅನುಮತಿ ನೀಡಲಿಲ್ವಂತೆ ಜೂಹಿ ಅವರ ತಂದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ