
ಇನ್ನು ಭಾಯ್ಜಾನ್ ಲವ್, ಅಫೇರ್ಗಳಿಂದ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಬಿಟೌನ್ನ ಕೆಲ ನಟಿಯರ ಜತೆ ಇವರ ಹೆಸರು ತಳುಕು ಹಾಕಿಕೊಂಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ವಿಷ್ಯಾ ಏನಪ್ಪಾ ಅಂದ್ರೆ ನಟಿ ಜೂಹಿ ಚಾವ್ಲಾ ಅವರನ್ನು ಮದುವೆಯಾಗಲು ಸಲ್ಲು ಮುಂದಾಗಿದ್ದರಂತೆ. ಜೂಹಿ ಅವರ ತಂದೆ ಜತೆ ಮಾತನಾಡಿದ್ದ ಸಲ್ಲು, ನಾವು ಮದುವೆಯಾಗುತ್ತೇವೆ ಎಂದು ಹೇಳಿದ್ದರಂತೆ. ಆದರೆ, ಇದಕ್ಕೆ ಜೂಹಿ ಮನೆಯಲ್ಲಿ ಒಪ್ಪಲಿಲ್ಲವಂತೆ. ನಿಮ್ಮಿಬ್ಬರ ಜೋಡಿ ಸರಿಹೊಂದುವುದಿಲ್ಲ ಎಂದು ಅನುಮತಿ ನೀಡಲಿಲ್ವಂತೆ ಜೂಹಿ ಅವರ ತಂದೆ.