ನವದೆಹಲಿ, ಜು.22- ನಾನು ಆಗಾಗ ಸಂತೋಷವನ್ನು ನಗುಮೊಗದಲ್ಲೇ ತೋರಿಸುತ್ತೇನೆ. ಈ ದೇಶದ 125 ಕೋಟಿ ಭಾರತೀಯರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಟ್ವೀಟ್ ಮಾಡಿದ್ದಾರೆ.
ಮುಂಬೈ ಮೂಲದ ಶಿಲ್ಪಿ ಅಗರ್ವಾಲ್ ಎಂಬುವರ 60-70ರ ಹೊಸ್ತಿನಲ್ಲಿಯೂ ನೀವು ಬಳಲದಂತೆ ಹೇಗೆ ಇರುತ್ತೀರಿ ಎಂದು ಕೇಳಿದ್ದಕ್ಕೆ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಪ್ರಧಾನಿ, ಈ ದೇಶದ 125 ಕೋಟಿ ಜನರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ. ನನ್ನ ಎಲ್ಲಾ ಸಮಯವು ದೇಶಕ್ಕೆ ಎಂದು ಉತ್ತರಿಸಿದ್ದಾರೆ.
ಪ್ರಧಾನಿಗಳೇ ನೀವು ನಗುತ್ತಿರಬೇಕು, ಬಾಕಿ ಎಲ್ಲವೂ ಚೆನ್ನಾಗಿವೆ ಎಂದಿರುವುದಕ್ಕೆ ಪ್ರಧಾನಿ ನಗುವಿನ ಎಮೋಜಿಯನ್ನು ಕಳುಹಿಸಿ ಅಭಿನಂದನೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ವಾರವಿಡೀ ಸದನದ ಕಲಾಪದಲ್ಲಿ ನಿರತರಾಗಿದ್ದ ಪ್ರಧಾನಿಗಳು ಇಂದು ಕೊಂಚ ನಿರಾಳರಾದಂತೆ ಕಂಡುಬಂದರು.