ನಂಜನಗೂಡು, ಜು.22- ಹಣಕಾಸಿನ ವಿಚಾರವಾಗಿ ಪರಸ್ಪರ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ನಡೆದಿದೆ.
ಉಪ್ಪಾರ ಸಮುದಾಯದ ಬಸವರಾಜು (30 ) ಕೊಲೆಯಾದ ದುರ್ದೈವಿ. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಗ್ರಾಮದ ಗಣೇಶ ನಾಯ್ಕ ಎಂಬುವನು ಒಂದು ವರ್ಷದ ಹಿಂದೆ ಮೃತ ಬಸವರಾಜುನಿಗೆ 1000 ಸಾಲ ನೀಡಿದ್ದನು. ಬಡ್ಡಿಯನ್ನು ನೀಡದೆ ಅಸಲನ್ನು ಕೊಡದೆ ಸತಾಯಿಸುತ್ತಿದ್ದ ಬಸವರಾಜು ಮನೆಗೆ ಏಕಾಏಕಿ ನುಗ್ಗಿದ ಗಣೇಶ ನಾಯ್ಕ ಪತ್ನಿಯ ಸಮ್ಮಖದಲ್ಲೆ ಜಗಳ ಆರಂಭಿಸಿ ಆತನನ್ನು ದಂಡಿಮಾರಮ್ಮ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಕೈಯಿಂದ ಹೊಡೆದು, ಎದೆಗೆ ತುಳಿದು ಜೋರಾಗಿ ಕೈಯಿಂದ ಬಸವರಾಜುನನ್ನು ತಳ್ಳಿದಾಗ ಆತ ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸಾವ್ರವಾಗಿ ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಗಣೇಶ್ ನಾಯ್ಕ ಜಾಗದಿಂದ ಖಾಲಿ ಮಾಡಿ ಪರಾರಿಯಾದನು. ಸುದ್ದಿ ತಿಳಿದ ಪತ್ನಿ ಪವಿತ್ರ ಹಾಗೂ ಗ್ರಾಮದವರು ಬಸವರಾಜನಿಗೆ ನೀರು ಕುಡಿಸಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಪ್ರಕರಣದ ಬಗ್ಗೆ ಪವಿತ್ರ ಬಿಳಿಗೆರೆ ಪೆÇೀಲೀಸ್ ಠಾಣೆಗೆ ದೂರು ನೀಡಿದ್ದು, ಈ ಮೊಕದ್ದಮೆ ದಾಖಲಿಸಿಕೊಂಡಿರುವ ಪಿಎಸ್ಐ ಸತೀಶ್ ವೃತ್ತ ನಿರೀಕ್ಷಕ ಶಿವಮೂರ್ತಿ ತನಿಖೆ ಕೈಗೊಂಡು ಆರೋಪಿ ಗಣೇಶ್ ನಾಯ್ಕ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಬಿಳಿಗೆರೆ ಪೆÇೀಲೀಸ್ ಠಾಣೆಗೆ ತಾ.ಪಂ ಸದಸ್ಯ ಹೆಚ್.ಎಸ್ ಮೂಗಶೆಟ್ಟಿ, ಗೊಳೂರು ಮಹದೇವ ಸ್ವಾಮಿ ಮುದ್ದು ಮಾದಶೆಟ್ಟಿ, ಭೇಟಿ ನೀಡಿ ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.