
ಕೋಲಾರ, ಜು.22- ಬೈಕ್ನಿಂದ ಜಾರಿ ಬಿದ್ದ ಬಾಲಕನ ಮೇಲೆ ಲಾರಿ ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಡಗೂರಿನ ನಿವಾಸಿ ರಾಹುಲ್(6) ಮೃತಪಟ್ಟ ಬಾಲಕ. ಇಂದು ಬೆಳಗ್ಗೆ ತಂದೆ ಜೊತೆ ಬೈಕ್ನಲ್ಲಿ ಇಟಿಸಿಎಂ ಆಸ್ಪತ್ರೆ ವೃತ್ತದಲ್ಲಿ ಬರುವಾಗ ರಸ್ತೆ ಉಬ್ಬು ಇದ್ದ ಕಾರಣ ಬೈಕ್ನಿಂದ ರಾಹುಲ್ ಜಾರಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಲಾರಿ ಈತನ ಮೇಲೆ ಹರಿದಿದೆ. ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.
ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.