ಮೈಸೂರು,ಜು.22- ವೇಶ್ಯವಾಟಿಕೆ ನಡೆಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು 19,300 ರೂ. ನಗದು ಹಾಗೂ 10 ಮೊಬೈಲ್ಗಳನ್ನು ವಶಪಡಿಸಿಕೊಂಡು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಪ್ರಕರಣ1: ವಿದ್ಯಾರಣ್ಯಪುರದ ಮನೆಯೊಂದರಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ 10,500 ನಗದು, ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕುವೆಂಪುನಗರದ ಲಕ್ಷ್ಮಿ(40), ಕಡಕೋಳದ ರವೀಂದ್ರ(38), ಮಂಡ್ಯಜಿಲ್ಲೆಯ ಹೊಸಹಳ್ಳಿ ಗ್ರಾಮದ ಶಿವಲಿಂಗಯ್ಯ(51) ಬಂಧಿತ ಆರೋಪಿಗಳು. ದಾಳಿ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2: ದಟ್ಟಹಳ್ಳಿಯ ಮೂರನೇ ಹಂತದ ಮಹಾಮನೆ ವೃತ್ತದ ಬಳಿ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ಮೂವರನ್ನು ಬಂಧಿಸಿದ್ದು, ಬಂಧಿತರಿಂದ 4,450 ನಗದು, ಎರಡು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಶ್ರೀಧರ್(26), ಕುಮಾರ್(26), ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿಯ ಮಹದೇವ್(33) ಬಂಧಿತ ಆರೋಪಿಗಳು.
ಪ್ರಕರಣ 3: ರಾಮಕೃಷ್ಣ ನಗರ ಐಬ್ಲಾಕ್ನ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ ಡಿಸಿಪಿ ಪೆÇಲೀಸರು ಮೂವರನ್ನು ಬಂಧಿಸಿದ್ದಾರೆ. ಪಾಂಡುಪುರದ ದೇವಕೊಪ್ಪದ ಅಭಿಷೇಕ್(28), ಹುಣಸೂರಿನ ಶಾಂತಕುಮಾರ್(48) ಹಾಗೂ ತಮ್ಮೇಗೌಡ(33) ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು 4,350 ನಗದು ಹಾಗೂ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.