ಬೆಂಗಳೂರು, ಜು.22- ಉದ್ಯಮಿ ಅವಿನಾಶ್ ಅಮರಲಾಲ್ ಅವರು ಕೋಟ್ಯಂತರ ರೂಪಾಯಿ ನಗದು ಮತ್ತು ಆಸ್ತಿ ದಾಖಲೆಗಳನ್ನು ಬೌರಿಂಗ್ ಇನ್ಸ್ಸ್ಟಿಟ್ಯೂಟ್ನ ಲಾಕರ್ಗಳಲ್ಲಿ ಇಟ್ಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಅವಿನಾಶ್ ಇನ್ನೂ ಕೆಲವು ಕ್ಲಬ್ಗಳಲ್ಲಿ ಸದಸ್ಯತ್ವ ಹೊಂದಿದ್ದು, ಅವುಗಳ ಮಾಹಿತಿಯನ್ನು ಕಲೆಹಾಕುತ್ತಿರುವ ಅಧಿಕಾರಿಗಳು, ಅವಿನಾಶ್ ಪತ್ತೆಗೆ ಬಲೆ ಬೀಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ಗಳಲ್ಲಿ ಅವಿನಾಶ್ ಸದಸ್ಯತ್ವ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡಿರುವ ಅಧಿಕಾರಿಗಳು, ಇಂತಹ ಕ್ಲಬ್ಗಳ ಅಧಿಕಾರಿಗಳನ್ನು ಸಂಪರ್ಕಿಸಿ ಅವಿನಾಶ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ಬೌರಿಂಗ್ ಇನ್ಸ್ಸ್ಟಿಟ್ಯೂಟ್ನ ಮೂರು ಲಾಕರ್ಗಳಲ್ಲಿ ಅವಿನಾಶ್ ರಹಸ್ಯವಾಗಿ 3.90 ಕೋಟಿ ರೂ.ನಗದು, 7.90 ಕೊಟಿ ಮೌಲ್ಯದ ವಜ್ರದ ಆಭರಣ ಮತ್ತು ಭಾರಿ ಬೆಲೆಬಾಳುವ ನೂರಾರು ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Raid on bizman’s Bowring Institute locker, unearths Rs 3.90cr, property papers, worth Rs 550cr, gold biscuits