
ಉಡುಪಿ:ಜು-22: ಶೀರೂರು ಶ್ರೀ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಸಂಬಂಧ ಮಹಿಳೆಯೊಬ್ಬರ ವಿಚಾರಣೆ ನಡೆಸುತ್ತಿರುವಾಗಲೇ ಮೂಲ ಮಠದಲ್ಲಿ ಬಾಟಲಿಯೊಂದು ಸಿಕ್ಕಿರುವುದು ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಶೀರೂರು ಮೂಲ ಮಠದಲ್ಲಿ ಸಿಕ್ಕ ಈ ಬಾಟಲಿಯಲ್ಲಿ ವಿಷವಿತ್ತು ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಇದನ್ನುಗೋಡಂಬಿ ಜ್ಯೂಸ್ ಎಂದು ಸ್ವಾಮೀಜಿಗೆ ಕುಡಿಸಲಾಗಿತ್ತು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಆದರೆ ಮೊರಿನ್ಜಿ ಹೆಸರಿನ ಪಾನೀಯ ಬಾಟಲಿ ಇದಾಗಿದ್ದು, ಇದು ಆರೋಗ್ಯ ವೃದ್ಧಿ ಪಾನೀಯದ ಬಾಟಲಾಗಿದೆ. ಆದರೆ ಗೋಡಂಬಿ ಜ್ಯೂಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿದಾಡುತ್ತಿದೆ. ವಾಸ್ತವದಲ್ಲಿ ಅದು ಶಕ್ತಿವರ್ಧಕ ಪಾನೀಯದ ಬಾಟಲ್, ಸ್ವಾಮೀಜಿಯೇ ತರಿಸಿಕೊಂಡು ಈ ಪಾನೀಯ ಕುಡಿಯುತ್ತಿದ್ದರು ಎಂದು ಹೇಳಲಾಗುತ್ತಿದೆ.
ಈ ವದಂತಿಹಾಗೂ ವಿಷಯಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
shirur mutt,lakshmivara swamiji,bottle