
25ಫ್ರೇಮ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಗರ` ಚಿತ್ರದಲ್ಲಿ ಅಭಿನಯಿಸಿರುವ ಖ್ಯಾತ ನಟ ಜಾನಿಲೀವರ್ ಇತ್ತೀಚೆಗೆ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ. ಮೂಲತಃ ತೆಲುಗಿನವರಾದ ಜಾನಿಲೀವರ್ ನಿರ್ದೇಶಕರು ನೀಡಿದ ಸಂಭಾಷಣೆಯನ್ನು ತಾಲೀಮು ನಡೆಸಿ ಸತತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಏಳು ಗಂಟೆಗಳ ಕಾಲ ಕನ್ನಡ ಭಾಷೆಯಲ್ಲಿ ಧ್ವನಿ ನೀಡಿದ್ದಾರೆ. ಜಾನಿಲೀವರ್ ಅವರು ಕನ್ನಡದಲ್ಲೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದಕ್ಕೆ ನಿರ್ದೇಶಕ ಕೆ..ಆರ್.ಮುರಳಿಕೃಷ್ಣ ಹಾಗೂ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಮುರಳಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಗರ್ ಗುರುರಾಜ್ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ, ಉಮಾಶಂಕರ್ ಬಾಬು ಸಂಕಲನ, ದಿನೇಶ್ ಕಲಾ ನಿರ್ದೇಶನ ಹಾಗೂ ಬಾಲಿವುಡ್ ಖ್ಯಾತಿಯ ಸರೋಜ್ ಖಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ರೆಹಮಾನ್, ಆವಂತಿಕ, ಆರ್ಯನ್, ಪ್ರಶಾಂತ್ ಸಿದ್ದಿ, ರಾಮಕೃಷ್ಣ, ರೂಪಾದೇವಿ, ಮನದೀಪ್ ರಾಯ್, ತಬಲ ನಾಣಿ, ರೋಹಿತ್, ಸುನೇತ್ರ ಪಂಡಿತ್, ಸುಚಿತ್ರ, ನಿರಂಜನ್, ರಾಜೇಶ್ ರಾವ್, ಸೋನು, ದಯಾನಂದ್, ಗುರುರಾಜ್ ಕಲಾಲ್ಬಂಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಶೇಷ ಜೋಡಿಯಾಗಿ ಖ್ಯಾತ ನಟರಾದ ಜಾನಿಲೀವರ್ ಹಾಗೂ ಸಾಧುಕೋಕಿಲ ಅಭಿನಯಿಸಿದ್ದಾರೆ.