
ಜೈಪುರ್, ಜು.21-ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಎಚ್ಚರಿಕೆ ನಡುವೆಯೂ ದೇಶದಲ್ಲಿ ಉದ್ರಿಕ್ತ ಗುಂಪಿನ ಹತ್ಯೆ ಪ್ರಕರಣಗಳು ಮುಂದುವರಿದಿದೆ. ಗೋವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಶಂಕೆಯಿಂದ ಜನರ ಗುಂಪೆÇಂದು 28 ವರ್ಷದ ಯುವಕನೊಬ್ಬನನ್ನು ಥಳಿಸಿ ಕೊಂದಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಅಲ್ವಾರ್ ಜಿಲ್ಲೆಯ ಲಾಲಾವಾಂಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಈ ಕೃತ್ಯ ನಡೆದಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರ್ಯಾಣದ ಕೊಲ್ಗಾಂವ್ ನಿವಾಸಿ ಅಕ್ಬರ್ ಖಾನ್ ಮತ್ತು ಅವರ ಸ್ನೇಹಿತ ಎರಡು ಹಸುಗಳನ್ನು ಕೊಂಡೊಯ್ಯುತ್ತಿದ್ದಾಗ, ಗೋ ಕಳ್ಳರೆಂಬ ಶಂಕೆ ಮೇರೆಗೆ ಗುಂಪೆÇಂದು ಅವರನ್ನು ಅಡ್ಡಗಟ್ಟಿ ತೀವ್ರವಾಗಿ ಥಳಿಸಿತು ಎಂದು ರಾಮಗಢ್ ಪೆÇಲೀಸ್ ಠಾಣಾಧಿಕಾರಿ ಸುಭಾಷ್ ಶರ್ಮ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ಬರ್ ಖಾನ್ ಸ್ನೇಹಿತ ಗುಂಪಿನ ದಾಳಿಯಿಂದ ತಪ್ಪಿಸಿಕೊಂಡು ಅರಣ್ಯದೊಳಗೆ ಪರಾರಿಯಾದ. ಆದರೆ ಖಾನ್ನನ್ನು ಗ್ರಾಮಸ್ಥರು ಮನಸೋಇಚ್ಛೆ ಥಳಿಸಿ ಕೊಂದರು ಎಂದು ಶರ್ಮ ಹೇಳಿದ್ದಾರೆ.
ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.