ಯಾಹೂ ಮೆಸೇಂಜರ್ ಯುಗಾಂತ್ಯ..!!

ಯಾಹೂ ಮೆಸೇಂಜರ್ ಕಾರ್ಯ ನಿಲ್ಲಿಸಿದ್ದರೂ ಮುಂದಿನ ಆರು ತಿಂಗಳುಗಳ ಕಾಲ ಬಳಕೆದಾರರು ಎಲ್ಲಾ ರೀತಿಯ ಡೌನ್​ಲೋಡ್ ಮತ್ತು ಚಾಟ್​ ಹಿಸ್ಟರಿಯನ್ನು ಬ್ಯಾಕ್​ಅಪ್​ ಮಾಡಿಕೊಳ್ಳಬಹುದು.
ಯಾಹೂ ಮೆಸೇಂಜರ್ ಸದ್ಯ ಕಾರ್ಯ ಸ್ಥಗಿತಗೊಳಿಸಿದ್ದು, ಪರ್ಯಾಯ ಅಪ್ಲಿಕೇಶನ್ ಇನ್ನೂ ಬಿಡುಗಡೆ ಮಾಡಿಲ್ಲ. ಸ್ಕ್ವೀರಲ್ ಹೆಸರಿನ ಆ್ಯಪ್​ ಇನ್ನೂ ಪೂರ್ಣಪ್ರಮಾಣದಲ್ಲಿ ಸಂಸ್ಥೆ ಬಿಡುಗಡೆ ಮಾಡಿಲ್ಲ.
ಮೂಲಗಳ ಪ್ರಕಾರ ಸ್ನ್ಯಾಪ್​ಚಾಟ್, ವೀಚಾಟ್, ವಾಟ್ಸ್​ಆ್ಯಪ್​ಗಳ ಪೈಪೋಟಿ ಎದುರಿಸಲಾಗದೆ ಯಾಹೂ ಮೆಸೇಂಜರ್ ಕಾರ್ಯ ನಿಲ್ಲಿಸಿದೆ ಎನ್ನಲಾಗಿದೆ. ಯಾಹೂ ಮೆಸೇಂಜರ್ 1998ರಲ್ಲಿ ಆರಂಭಗೊಂಡು ಯಾಹೂ ಪೇಜರ್ ಹೆಸರಿನಲ್ಲಿ ಇಮೇಲ್ ಹಾಗೂ ಸಂಕ್ಷಿಪ್ತ ಸಂದೇಶ ಸೇವೆ ಪ್ರಾರಂಭಿಸಿತ್ತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ