ನವದೆಹಲಿ: ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಬುಧವಾರ ಆರಂಭಗೊಂಡ ಮುಂಗಾರು ಅಧಿವೇಶನದಲ್ಲಿ 10 ಭಾಷೆಗಳಲ್ಲಿ ಮಾತನಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಬುಧವಾರ ಆರಂಭವಾದ ರಾಜ್ಯಸಭೆ ಕಲಾಪದಲ್ಲಿ ವೆಂಕಯ್ಯ ನಾಯ್ಡು ಅವರು, ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದ ಘೋಷಣೆ ಮಾಡುವಾಗ ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಿದ್ದು, ಇದು ಹೊಸ ದಾಖಲೆಯಾಗಿ ಮಾರ್ಪಟ್ಟಿದೆ.
ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ರಾಜ್ಯಸಭೆ ಕಲಾಪದಲ್ಲಿ 22 ಭಾಷೆಗಳಲ್ಲಿ ಮಾತನಾಡಬಹುದು ಎಂದು ಪ್ರಕಟಿಸಿರು. ಆದರೆ ಸದಸ್ಯರು ಮಾತನಾಡುವಾಗ ಸಚಿವಾಲಯದ ಗಮನಕ್ಕೆ ತರಬೇಕಾಗುತ್ತದೆ ಎಂದೂ ನಾಯ್ಡು ಮಾಹಿತಿ ನೀಡಿದರು.
ರಾಜ್ಯಸಭೆಯಲ್ಲಿ ಈ ಮೊದಲು ರಾಜ್ಯಸಭೆಯಲ್ಲಿ ಅಸ್ಸಾಮೀ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು , ತೆಲುಗು , ಉರ್ದು ಸೇರಿದಂತೆ 17 ಭಾಷೆಗಳಲ್ಲಿ ಮಾತನಾಡುವ ಅವಕಾಶ ಇತ್ತು. ಇದೀಗ ಹೆಚ್ಚುವರಿಯಾಗಿ ದೋಗ್ರಿ, ಕಾಶ್ಮೀರಿ, ಕೊಂಕಣಿ, ಸಾಂಥಾಲಿ ಮತ್ತು ಸಿಂಧಿ ಭಾಷೆಗಳ ಸೇರ್ಪಡೆಯಾಗಿದೆ.