ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ

ಮಂಡ್ಯ, ಜು.20-ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಗರದ ಸರ್.ಎಂ.ವಿ.ಕ್ರೀಡಾಂಗಣದ ಪಶ್ಚಿಮ ಭಾಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುಮಾರು 500ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಕಾರ್ಯಕರ್ತರನ್ನು ಕರೆತರಲು ಮುಖಂಡರು, ಜನಪ್ರತಿನಿಧಿಗಳು ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಬಂದೋಬಸ್ತ್‍ಗಾಗಿ ಹಾಸನದಿಂದ ಎಸ್‍ಪಿ, ಡಿವೈಎಸ್ಪಿ, 5 ಮಂದಿ ಸಿಪಿಐ, 30 ಎಎಸ್‍ಐ, 12 ಪಿಎಸ್‍ಐ ಹಾಗೂ 250 ಹೆಡ್‍ಕಾನ್‍ಸ್ಟೆಬಲ್‍ಗಳು ಸೇರಿದಂತೆ ಮಂಡ್ಯ ಹಾಗೂ ಕೆಆರ್‍ಎಸ್ ಭಾಗದಿಂದ ಒಬ್ಬರು ಎಸ್‍ಪಿ, ಇಬ್ಬರು ಎಎಸ್‍ಪಿ, 7 ಡಿವೈಎಸ್ಪಿ, 14 ಸಿಪಿಐ, 38 ಪಿಸಿಐ, 107 ಎಎಸ್‍ಐ, 700 ಮಂದಿ ಕಾನ್‍ಸ್ಟೆಬಲ್ ಜೊತೆಗೆ 10ಡಿಎಆರ್, 5 ಎಎಸ್‍ಪಿ, 400 ಮಂದಿ ಗೃಹ ರಕ್ಷಕದಳವನ್ನು ನಿಯೋಜಿಸಲಾಗಿದೆ. ಅಲ್ಲದೆ, 6 ಆ್ಯಂಬುಲೆನ್ಸ್, 4 ಅಗ್ನಿಶಾಮಕ ವಾಹನಗಳು, 4 ಕ್ರೇನ್‍ಗಳು, 4 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನಿಯೋಜಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ