ಹುಬ್ಬಳ್ಳಿ: ಎಸ್.ಸಿ.ಎಸ್.ಟಿ ನೌಕರರ ಹಿಂಬಡ್ತಿಯ ಅನ್ಯಾಯದ ವಿರುದ್ಧವಾಗಿ ನಾಳೆ ಧಾರವಾಡದಲ್ಲಿ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ.ಎಸ್.ಟಿ ನೌಕರರ ಸಂಘದ ಮುಖಂಡರಾದ ದಾನಪ್ಪ ಕಬ್ಬೇರ ತಿಳಿಸಿದರು. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರಿಗೆ ಆಗಿರುವ ಹಿಂಬಡ್ತಿಯಿಂದ ವಿವಿಧ ಇಲಾಖೆಯಲ್ಲಿನ ನೌಕರರು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಹಿಂಬಡ್ತಿ ಅನ್ಯಾಯದ ವಿರುದ್ಧ ಹುದ್ದೆಗೆ ಹಾಜರಾಗದೆ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಎಸ್.ಸಿ.ಎಸ್.ಟಿ ನೌಕರರ ಹಿತಕಾಪಾಡಲು ಕೇಂದ್ರ ಸರ್ಕಾರ 77ನೇ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿ ನೌಕರರಿಗೆ ಅನುಕೂಲ ಮಾಡಿತ್ತು. ಆದರೇ ಪ್ರಸ್ತುತವಾಗಿ ಎಸ್.ಸಿ.ಎಸ್.ಟಿ ನೌಕರರ ಹಿಂಬಡ್ತಿಯಲ್ಲಿ ಅನ್ಯಾಯವಾಗಿದೇ ಈ ನಿಟ್ಟಿನಲ್ಲಿ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ನಾಳೆ ನಡೆಯುವ ಪ್ರತಿಭಟನೆಯೂ ಧಾರವಾಡದ ಕಡಪಾ ಮೈದಾನದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆಯಲಿದೆ ನಂತರ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ ಮುಖ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪಾಂಡುರಂಗ ಪಮ್ಮಾರ, ವಿಜಯ ಗುಂಜಕರ್, ಲಕ್ಷ್ಮಣ ಡೊಂಗ್ರೆ, ಲಕ್ಷ್ಮಣ ಬಕ್ಕಾಯಿ ಸೇರಿದಂತೆ ಇತರರು ಇದ್ದರು.