ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಹಲವು ಬಾರಿ ಪ್ರತಿಭಟನೆ, ಮುಷ್ಕರ ಮಾಡಿದ್ರು. ಆದ್ರೆ ಕೇಂದ್ರ ಸರ್ಕಾರದಿಂದ ಮಾತ್ರ ಯಾವುದೇ ಉತ್ತರ ಸಿಕ್ಕಿರಲ್ಲಿಲ್ಲ. ಹೀಗಾಗಿ ಇಂದಿನಿಂದ ದೇಶಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್ ಸಂಘಟನೆ ಮುಂದಾಗಿದೆ.
ಟೋಲ್ ಮುಕ್ತ ಭಾರತಕ್ಕೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ದೇಶಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇಂದಿನಿಂದ ದೇಶವ್ಯಾಪಿ ಲಾರಿ ಮಾಲೀಕರ ಮುಷ್ಕರ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಬೃಹತ್ ಱಲಿ ನಡೆಸಲು ಬೆಂಗಳೂರು ಲಾರಿ ಮಾಲೀಕರು ನಿರ್ಧರಿಸಿದ್ದಾರೆ.
ಇನ್ನು ದೇಶದಲ್ಲಿ 412 ಟೋಲ್ಗಳಿದ್ದು ವರ್ಷಕ್ಕೆ 12 ಸಾವಿರ ಕೋಟಿ ಹಣ ವಸೂಲಿ ಆಗ್ತಿದೆ. ಈ ಹಣ ನಾವು ಕೋಡೋಕೆ ರೆಡಿ ಇದ್ದೀವಿ, ಆದ್ರೆ ಒನ್ ಟೈಂ ಪೇಮೆಂಟ್ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಟೋಲ್ ವಿಚಾರದಲ್ಲಿ ದಿಕ್ಕು ತಪ್ಪಿಸುತ್ತಿದೆ. ಇದ್ರ ಜೊತೆಗೆ ಡೀಸೆಲ್ ಬೆಲೆ ಕೂಡ ಜಾಸ್ತಿಯಾಗಿದೆ. ಹೀಗಾಗಿ ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಲಾರಿ, ಟ್ಯಾಂಕರ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಬಸ್ ಟೆಂಪೋ, ಸರಕು ಸಾಗಣೆದಾರರ ಸಂಘ ಈ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಕೇಂದ್ರ ಸರ್ಕಾರ ಎರಡು ದಿನದ ಒಳಗಡೆ ತಮ್ಮ ಬೇಡಿಕೆಗೆ ಬಗ್ಗದೆ ಇದ್ದರೆ ರಸ್ತೆರಸ್ತೆಗಳಲ್ಲಿ ವಾಹನ ನಿಲ್ಲಿಸಿಬಿಡಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.