ಹುಬ್ಬಳ್ಳಿ- ಮಹದಾಯಿ ನದಿ ನೀರು ಹಂಚಿಕೆ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಧಾರವಾಡ ಜಿಲ್ಲೆಯ ನೂರಾರು ರೈತರು ಕುಂದಗೋಳದಿಂದ ಬಂಡಾಯದ ನಾಡು ನರಗುಂದದ ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಜುಲೈ 21ರ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಿಂದ ಗದಗ ಜಿಲ್ಲೆ ನರಗುಂದ ವರೆಗೆ ಪಾದಯಾತ್ರೆ ಮಾಡುವ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇಂದು ಬೆಳಿಗ್ಗೆ ಕುಂದಗೋಳ ಪಟ್ಟಣದ ಗಾಳಿಮರಿಯಮ್ಮ ದೇವಸ್ಥಾನದಿಂದ ಶ್ರಿಗಳ ನೇತೃತ್ವದಲ್ಲಿ ಪ್ರಾರಂಭವಾದ ಪಾದಯಾತ್ರೆಯು, ಬೆನಕನಹಳ್ಳಿ, ಹಿರೇನೆರ್ತಿ,ಯರಗುಪ್ಪಿ, ಮಾರ್ಗವಾಗ ನಾಳೆ ದಿನಾಂಕ 21 ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣಕ್ಕೆ ತಲುಪುವುದು. ಅಷ್ಟೇ ಅಲ್ಲದೇ ಮಹದಾಯಿ, ಕಳಸಾ ಬಂಡೂರಿ ಯೋಜನೆಯೊಂದಿಗೆ ರೈತರ ಸಂಪೂರ್ಣ ಸಾಲ ಮನ್ನಾ ಒತ್ತಾಯ ಕೂಡ ರೈತರು ಮಾಡಿದ್ದಾರೆ. ಕರವೆ ಜಿಲ್ಲಾಧ್ಯಕ್ಷ ಅಮೃತ ಇ
ಜಾರೆ, ಕಲ್ಲಪ್ಪ ಹರಕುಣಿ, ಪರಮೇಪ್ಪ ಸಣ್ಣನಾಯ್ಕರ್, ವೇಂಕನಗೌಡ ಪಾಟೀಲ, ಶಂಕರಗೌಡಾ ದೊಡ್ಡಮನಿ, ಸಾವಿರಾರು ರೈತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.