
ಚೆನ್ನೈ: ತಮಿಳು ಕಿರುತೆರೆಯ ಖ್ಯಾತ ನಟಿ ಪ್ರಿಯಾಂಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬುಧವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳಿನ ‘ವಂಶಂ’ ಧಾರಾವಾಹಿಯಲ್ಲಿ ಪ್ರಿಯಾಂಕಾ ಜ್ಯೋತಿಕಾ ಪಾತ್ರ ನಿರ್ವಹಿಸುತ್ತಿದ್ದರು. ಇದೇ ಧಾರಾವಾಹಿಯಲ್ಲಿ ಖ್ಯಾತ ನಟಿ ರಮ್ಯ ಕೃಷ್ಣ ಸಹ ಅಭಿನಯಿಸುತ್ತಿದ್ದಾರೆ.
ಸಾಂಸಾರಿಕ ಕಲಹವೇ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಿಯಾಂಕಾ-ಅರುಣ್‍ಬಾಲಾ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ಎರಡು ತಿಂಗಳ ಹಿಂದೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದರು.