ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 5 ಸ್ಟೇಟ್ ಬ್ಯಾಂಕ್ ಗಳಿಗೆ 113 ಬಿಲಿಯನ್ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಂದು ವಾರದಲ್ಲಿ 5 ಸ್ಟೇಟ್ ಬ್ಯಾಂಕ್ ಗಳಿಗೆ ಒಟ್ಟು 113.36 ಬಿಲಿಯನ್ ರೂಪಾಯಿ (1.65 ಬಿಲಿಯನ್ ಡಾಲರ್) ನಷ್ಟು ಪ್ಯಾಕೇಜ್ ಬಿಡುಗಡೆ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ರಾಯ್ಟರ್ಸ್ ಗೆ ಹೇಳಿರುವುದು ವರದಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 28.16 ಬಿಲಿಯನ್ ರೂಪಾಯಿಯಷ್ಟು ಬಂಡಾವಳ ಹೂಡಿದರೆ, ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಅಲ್ಲಹಾಬಾದ್ ಬ್ಯಾಂಕ್ ಗಳಿಗೂ ಹೊಸದಾಗಿ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಹೂಡಿಕೆ ಕಳೆದ ವರ್ಷ ಘೋಷಿಸಲಾಗಿದ್ದ 2.11 ಟ್ರಿಲಿಯನ್ ರೂಪಾಯಿ ಪ್ಯಾಕೇಜ್ ನ ಭಾಗವಾಗಿದ್ದು, ಸಂಸತ್ ನಿಂದ ಪ್ರತ್ಯೇಕ ಅನುಮೋದನೆ ಅಗತ್ಯವಿದೆ.