ಬೆಂಗಳೂರು:ಜು-೧೯: ಬೆಂಗಳೂರು ನಗರವನ್ನು ಮೇಲ್ದರ್ಜೆಗೇರಿಸಲು ಹಲವು ಸಲಹೆಗಳನ್ನು ಬಿಪ್ಯಾಕ್ ತಂಡದ ಕಿರಣ್ ಮಜುಂದಾರ್ ಷಾ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ನೀಡಿದರು.
ಗುರುವಾರ ವಿಧಾನಸೌಧದ ಕಚೇರಿಗೆ ಆಗಮಿಸಿದ ಬಿ ಪ್ಯಾಕ್ ತಂಡ ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಬೆಂಗಳೂರು ಟ್ರಾಫಿಕ್,ಕಸ, ಅನಧಿಕೃತ ಕೇಬಲ್ ,ಸಾರಿಗೆ ವ್ಯವಸ್ಥೆಯಲ್ಲಿನ ಸಮಸ್ಯೆಗೆ ಪರಿಹಾರದ ಬಗ್ಗೆ ಚರ್ಚಿಸಿದರು.
ಪ್ರತಿ ಕಾರ್ಯಕ್ರಮಕ್ಕೂ ಡೆಡ್ಲೈನ್ ನೀಡಿದರೆ ಎಲ್ಲ ಯೋಜನೆಗಳು ಸಮಯಕ್ಕೆ ಸರಿಯಾಗಿ ನಡೆಯಲಿವೆ. ಈಗಿರುವ ವ್ಯವಸ್ಥೆಯಿಂದ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದ್ದು, ಈ ಸಮಸ್ಯೆ ನೀಗಿಸಲು ಕ್ರಮಕ್ಕೆ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ರಸ್ತೆನಿರ್ಮಾಣ, ರಸ್ತೆ ಗುಂಡಿಮುಚ್ಚುವ ಕೆಲಸಗಳು ಗಂಭೀರವಾಗಿ ನಡೆಯುತ್ತಿವೆ. ಡೆಂಡರ್ ಶ್ಯೂರ್ ಕಾರ್ಯಕ್ರಮ ಸಹ ಪ್ರಗತಿಯಲ್ಲಿ. ಈ ಎಲ್ಲ ಸಲಹೆಯನ್ನು ಪರಿಶೀಲಿಸಿ, ಬೆಂಗಳೂರಿನ ಟ್ರಾಫಿಕ್,ಕಸ, ರಸ್ತೆ ಸಮಸ್ಯೆ ನೀಗಿಸೋಣ ಎಂದು ಭರವಸೆ ನೀಡಿದರು.