ಮುಂಬೈ:ಮುಂಬರುವ ಅಂಗ್ಲರ ವಿರುದ್ದದ ಮೂರು ಟೆಸ್ಟ್ ಸರಣಿಗೆ ಆಯ್ಕೆ ಮಂಡಳಿ 18 ಆಟಗಾರರನ್ನೊಳಗೊಂಡ ಆಟಗಾರರನ್ನ ಪ್ರಕಟಿಸಿದೆ. ಯುವ ಆಟಗಾರರದ ರಿಷಬ್ ಪಂತ್ ಮತ್ತು ಕುಲ್ದೀಪ್ ಯದವ್ಗೆ ಮಣೆಹಾಕಲಾಗಿದೆ.
ಮೂರು ಟೆಸ್ಟೆಗೆ ಭಾರತೀಯ ತಂಡ
ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪುಜಾರ, ಕರುಣ್ ನಾಯರ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ, ಮೊಹ್ಮದ್ ಶಮಿ, ಉಮೇಶ್ಯಾದವ್, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್.
ಧೋನಿ ಕ್ರಿಕೆಟ್ಗೆ ನಿವೃತ್ತಿ ?
ಮೊನ್ನೆ ಮೂರನೇ ಮತ್ತು ಏಕದಿನ ಪಂದ್ಯದಲ್ಲಿ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂ.ಎಸ್.ಧೋನಿ ಅಂಪೈರ್ ಬಳಿ ಹೋಗಿ ಚೆಂಡು ಪಡೆದಿದ್ದು ಭಾರೀ ಚರ್ಚೆಯ ವಿಷಯವಾಗಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಧೋನಿ ಸೀಮಿತ ಓವರ್ಗಳ ಆವೃತ್ತಿಗೂ ನಿವೃತ್ತಿ ಘೋಷಿಸುತ್ತಾರಾ ಎಂಬುರದ ಬಗ್ಗೆ ಕೂತೂಹಲ ಕೆರೆಳಿಸಿದೆ. ಧೋನಿ ಅಭಿಮಾನಿಗಳು ಟ್ವಿಟರ್ನಲ್ಲಿ ದಯವಿಟ್ಟು ಕ್ರಿಕೆಟ್ಗೆ ನಿವೃತ್ತಿ ಘೋಷಿಸಬೇಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ.
ಪಂದ್ಯ ಮುಗಿದ ಬಳಿಕ ಧೋನಿ ಏಕೆ ಅಂಪೈರ್ ಬಳಿ ಹೋಗಿ ಚೆಂಡನ್ನ ಪಡೆದರು ಎಂಬುದೇ ಯಾರಿಗೂ ತಿಳಿಯದ ವಿಷಯವಾಗಿದೆ.
ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟೆ ಸರಣಿ ಸೋತಿದ್ದ ಹಿನ್ನೆಲೆಯಲ್ಲಿ ಟೆಸ್ಟೆಗೆ ದಿಢೀರ್ ಅಂತ ನಿವೃತ್ತಿ ಘೋಷಿಸಿದ್ದರು.