
ದಾವಣಗೆರೆ,ಜು.18- ತುಂಗಭದ್ರ ನದಿಯ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಹರಿಹರ ತಹಸೀಲ್ದಾರ್ ರೆಹನ್ ಪಾಷ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತುಂಗಭದ್ರ ಅಣ್ಣೆಕಟ್ಟಿನಿಂದ ಹೆಚ್ಚಿನ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರಿನಲ್ಲಿ ಧನಕರು ತೊಳೆಯುವುದು, ಈಜಲು ನೀರಿಗಿಳಿಸುವುದನ್ನು ಮಾಡಬಾರದು ಎಂದು ಹರಿಹರ ತಾಲ್ಲೂಕು ತುಂಗಾಭದ್ರ ನದಿ ಪಾತ್ರದ ಗ್ರಾಮಗಳ ನಿವಾಸಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.