
ಮೈಸೂರು, ಜು.18- ನಂಜನಗೂಡು ಎಪಿಎಂಸಿ ಗೋದಾಮಿನಲ್ಲಿ ಪಡಿತರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಹಿರಿಯ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರನ್ನು ಅಮಾನತುಪಡಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಾದ ಮರುಳಸಿದ್ದ ಆರಾಧ್ಯ, ರಾಘವೇಂದ್ರ ಹಾಗೂ ಶಿವಶಂಕರಪ್ಪ ಅವರು ನಂಜನಗೂಡು ಎಪಿಎಂಸಿ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದಾಗ 36.98 ಲಕ್ಷ ರೂ. ಬೆಲೆಯ ಪಡಿತರ ನಾಪತ್ತೆಯಾಗಿದ್ದುದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅವರು ಗಮನಿಸದೆ ಕರ್ತವ್ಯಲೋಪ ಎಸಗಿದ್ದಾರೆಂದು ಕಾರಣ ನೀಡಿ ಅವರನ್ನು ಅಮಾನತುಪಡಿಸಿ ಆಹಾರ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.