ನವದೆಹಲಿ, ಜು.18- ಸ್ವಾತಂತ್ರೋತ್ಸವ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿ ಐದು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ.
ಈ ಐದು ಪ್ರಮುಖ ಘೋಷಣೆಗಳ ಜತೆಗೆ ಮತ್ತೊಂದು ಶುಭ ಸುದ್ದಿಯನ್ನು ಮೋದಿ ಅವರು ನೀಡಲು ಮುಂದಾಗಿದ್ದಾರೆ. ಜುಲೈ 18ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಐದು ಪ್ರಮುಖ ಮಸೂದೆಗಳನ್ನು ಮಂಡಿಸಿ, ಕಾನೂನು ರೂಪ ಕೊಡುವುದು ಒಂದೆಡೆಯಾದರೆ, ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿ ಏರಿಕೆ ಪ್ರಮುಖವಾಗಿ ತೆಗೆದುಕೊಳ್ಳುವ ನಿರ್ಧಾರವಾಗಲಿದೆ.
ಸ್ವಾತಂತ್ರ್ಯೋತ್ಸವ ದಿನದಂದು ಮೋದಿಯಿಂದ 5 ದೊಡ್ಡ ಘೋಷಣೆ! 7ನೇ ವೇತನ ಆಯೋಗದ ಬಹು ನಿರೀಕ್ಷಿತ ಶಿಫಾರಸ್ಸುಗಳಿಗೆ ಮೋದಿ ತಂಡ ಒಪ್ಪಿಗೆ ಸಿಕ್ಕಿದೆ. ಜತೆಗೆ ಸುಮಾರು 1 ಕೋಟಿಗೂ ಮಂದಿಗೆ ಲಾಭವಾಗಲಿರುವ ನಿವೃತ್ತಿ ವಯಸ್ಸು ಏರಿಕೆ(60ರಿಂದ 62ಕ್ಕೆ) ಬೇಡಿಕೆಗೆ ಮೋದಿ ಅವರು ಅಸ್ತು ಎಂದಿದ್ದಾರೆ.
ವರ್ಷಕ್ಕೆ ಎರಡು ಬಾರಿ ಸಂಬಳ ಏರಿಕೆ 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಸಂಬಳ ಏರಿಕೆ ಮಾಡುವುದರ ಜತೆಗೆ ವರ್ಷಕ್ಕೆರಡು ಬಾರಿ ಸಂಬಳ ಏರಿಕೆ(ಜನವರಿ ಹಾಗೂ ಜುಲೈ) ಜೀವನ ಮಟ್ಟ ಸೂಚಿ ಅನ್ವಯ ವೇತನ ಏರಿಕೆಯಾಗಲಿದೆ. ಇದು ಅತಿಥಿ ಶಿಕ್ಷಕರು (ಜೆಬಿಟಿ/ಡ್ರಾಯಿಂಗ್ ಟೀಚರ್, ಮಾಸ್ಟರ್ ಅಥವಾ ಉಪನ್ಯಾಸಕರು) 26,000ರು, 30,000 ಹಾಗೂ 36,000 ರು ಪಡೆಯಲಿದ್ದು, ಜುಲೈ 01, 2018ರಿಂದ ಅನ್ವಯವಾಗಲಿದೆ.
ವೇತನ ಹೆಚ್ಚಳ ಬೇಡಿಕೆ:
2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಲಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1 ಕೋಟಿ ಮಂದಿಗೆ ಲಾಭವಾಗಲಿದೆ.
ಆಯೋಗದ ಶಿಫಾರಸ್ಸು ಜಾರಿಗೆ ತಂದ ರಾಜ್ಯಗಳು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹರ್ಯಾಣ ಸರ್ಕಾರವು ಅತಿಥಿ ಶಿಕ್ಷಕರ ಸಂಬಳವನ್ನು ಶೇ 20 ರಿಂದ 25ರಷ್ಟು ಏರಿಕೆ ಮಾಡಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರ್ಕಾರಗಳು ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ ಆಯೋಗದ ಶಿಫಾರಸ್ಸಿನ ಲಾಭವನ್ನು ನೀಡಲು ಮುಂದಾಗಿವೆ. ಕನಿಷ್ಟ ವೇತನ ಏರಿಕೆ ಜೂನ್ 2016ರಲ್ಲಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ಕನಿಷ್ಟ ವೇತನವನ್ನು 18,000 ರುಗೇರಿಸಲಾಗಿತ್ತು. ಅರುಣ್ ಜೇಟ್ಲಿ ಅವರು ನೀಡಿದ ಭರವಸೆಯಂತೆ ಜನವರಿ 2016ರಿಂದ ಹಿಂಬಾಕಿ ಮೊತ್ತ ಕೂಡಾ ಲಭ್ಯವಾಗಲಿದೆ. ಕನಿಷ್ಟ ವೇತನವನ್ನು 18,000 ರು ನಿಂದ 21,000 ರು ಗಳಿಗೆ ಏರಿಸುವಂತೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಇನ್ನೂ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡು, ಆಗಸ್ಟ್ 15ರಂದು ಘೋಷಿಸುವ ಸಾಧ್ಯತೆಯಿದೆ.
8 ಲಕ್ಷ ಶಿಕ್ಷಕರಿಗೆ ಸಂಬಳ ಏರಿಕೆ ಅಕ್ಟೋಬರ್ 2017ರಂದು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಹಾಗೂ ಯುಜಿಸಿ ನೆರವು ಪಡೆದ ವಿದ್ಯಾಸಂಸ್ಥೆಗಳಿಗೆ ಸೇರಿದ 8 ಲಕ್ಷ ಶಿಕ್ಷಣ ವರ್ಗಕ್ಕೆ 10,400 ಹಾಗೂ 49,800 ತನಕ ಸಿಗಲಿದೆ. ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.