ಹನೂರು, ಜು.18- ಮೊದಲೇ ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುತ್ತಾರೆ. ಇನ್ನು ಮೂಲಭೂತ ಸೌಲಭ್ಯ ಇಲ್ಲದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೆÇೀಷಕರು ಹಿಂದೆ ಮುಂದೆ ನೋಡುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಗಡಿ ಭಾಗ ಹಾಗೂ ಹನೂರು ಶೈಕ್ಷಣಿಕ ವಲಯಕ್ಕೆ ಸೇರಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಓಬೆರಾಯನ ಕಾಲದ ಕಟ್ಟಡವೊಂದು ಶಿಥಿಲಾವಸ್ಥೆಗೊಂಡು ಅನಾವುತಕ್ಕೆ ಆಹ್ವಾನ ನೀಡುತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ. ಹನೂರು ಶೈಕ್ಷಣಿಕ ವಲಯದಿಂದ 55 ಕಿ.ಮೀ ದೂರ ಹಾಗೂ ಜಿಲ್ಲೆಯ ಗಡಿ ಭಾಗವಾಗಿರುವ ಯರಂಬಾಡಿ ಗ್ರಾಮವು ಹೂಗ್ಯಂ ಗ್ರಾಪಂಗೆ ವ್ಯಾಪ್ತಿಗೆ ಸೇರಿರುತ್ತದೆ. ಅಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಕಟ್ಟಡಗಳಿದ್ದು, ಒಂದು ಪುರಾತನ ಹಾಗೂ ಓಬೆರಾಯನ ಕಾಲದ ಕಟ್ಟಡವಾಗಿದ್ದು ಬಳಕೆಗೆ ಯೋಗ್ಯವಿಲ್ಲದ ಕಟ್ಟಡ ಯಾವ ಕ್ಷಣದಲ್ಲಾದರೂ ಅನಾವುತಕ್ಕೆ ಬಾಯ್ತೆರೆದು ನಿಂತಿದ್ದು, ವಿರಾಮ ವೇಳೆಯಲ್ಲೂ ಸಹ ಮಕ್ಕಳು ಆ ಕಡೆ ಹೋಗದಂತೆ ಶಿಕ್ಷಕರು ಎಚ್ಚರ ವಹಿಸಿದ್ದಾರೆ. ಮತ್ತೊಂದು ನೂತನ ಕಟ್ಟಡವಾದರೂ ಗುತ್ತಿಗೆದಾರ ನಿರ್ಲಕ್ಷ್ಯಕ್ಕೊಳಾಗಿ ಕಾಮಗಾರಿ ಗುಣಮಟ್ಟ ಕಳಪೆಯಿಂದ ಕೂಡಿದ್ದು, ಯಾವಾಗ ಮಳೆ ಬಂದರೂ ಮಕ್ಕಳು ಕುಳಿತುಕೊಳ್ಳಲಾರದಷ್ಟು ಕಟ್ಟಡ ಪೂರ್ತಿ ಸೋರುತ್ತಿರುತ್ತದೆ. ಆ ಸಮಯದಲ್ಲಿ ಮಕ್ಕಳು ಮೂಲೆಗಳಲ್ಲಿ ನಿಂತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಶೈಕ್ಷಣಿಕ ವರ್ಷದಲ್ಲಿ 60 ಮಕ್ಕಳಿದ್ದು, ಒಂದರಿಂದ ಐದನೇ ತರಗತಿವರೆಗೆ ವಿದ್ಯಾಭ್ಯಾಸ ನಡೆಯುತ್ತದೆ. ಒಬ್ಬ ಖಾಯಂ ಶಿಕ್ಷಕ ಮತ್ತೊಬ್ಬ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ ಒಂದೇ ಕೊಠಡಿ ಜಗಲಿ ಮೇಲೆ ಮಕ್ಕಳ ಪಾಠ ಪ್ರವಚ ನಡೆಯುತ್ತಿದ್ದು ಪಾಠದ ಸಾರಾಂಶವನ್ನು ಅರ್ಥೈಸಿಕೊಳ್ಳಲು ಮಕ್ಕಳಿಗೆ ಕಷ್ಟವಾಗುತ್ತಿದೆ. ಮಳೆ-ಗಾಳಿಗೆ ಕಟ್ಟಡ ಕುಸಿದು ಬಿದ್ದು, ಪ್ರಾಣ ಹಾನಿ ಸಂಭವಿಸಬಹುದೇ ಎಂದು ಶಿಕ್ಷಕರು ಮತ್ತು ಪೆÇೀಷಕರು ಪ್ರತಿನಿತ್ಯ ಆತಂಕದಲ್ಲಿ ಕಾಲ ಕಳೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಎಷ್ಟೋ ಬಾರಿ ತಂದರೂ ಪ್ರಯೋಜನವಾಗುತ್ತಿಲ್ಲ. ಮತ್ತು ಕಟ್ಟಡ ತೆರವುಗೊಳಿಸಿ ಎಂದು ಗ್ರಾಪಂಗೆ ಮನವಿ ಮಾಡಿದರೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಬಿಸಿಯೂಟ ಶೌಚಾಲಯ ಉಪಯೋಗಕ್ಕಾಗಿ ಸರ್ಕಾರದ ವತಿಯಿಂದ 2014-15ನೆ ಸಾಲಿನಲ್ಲಿ ಕೊಳವೆ ಬಾವಿ, ಪೈಪ್ಲೈನ್, ವಿಧ್ಯುತ್ ಆಳವಡಿಸುವ ಕಾಮಾಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಶೌಚಾಲಯ ಕಟ್ಟಡ ಕೊಳವೆ ಬಾವಿ ಹೊರತು ಪಡಿಸಿ ಇನ್ನೂಳಿದ ಪೈಪ್ಲೈನ್, ವಿದ್ಯುತ್ ಸಂಪರ್ಕ ಇದುವರೆವಿಗೂ ಕಲ್ಪಿಸಿಲ್ಲ. ಕಾಮಗಾರಿ ಕಳಪೆಯಿಂದ ಕೂಡಿದ್ದು , ಶೌಚಾಲಯ ಬಾಗಿಲು ಪದೆ ಪದೇ ಕಿತ್ತು ಹೋಗುತ್ತಲೇ ಇರುತ್ತದೆ. ಎಷ್ಟು ಬಾರಿ ಮನವಿ ಮಾಡಿದರೂ ಏನು ಪ್ರಯೋಜನ ಆಗುತ್ತಿಲ್ಲ. ಶಿಕ್ಷಣ ಇಲಾಖೆಯ ಅವ್ಯವಸ್ಥೆಯಿಂದ ಶಾಲೆ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದ್ದು, ತುಂಬಾ ನೋವಾಗುತ್ತಿದೆ ಎಂದು ಎಸ್ಟಿಎಂಸಿ ಅಧ್ಯಕ್ಷ ವಸಂತ ಕುಮಾರ್ ಆರೋಪಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯತ್ತ ಗಮನ ಹರಿಸಿ ಶಿಥಿಲಗೊಂಡಿರುವ ಕಟ್ಟಡಗಳನ್ನು ದುರಸ್ತಿಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ.