ಜಯಚಾಮರಾಜ ಒಡೆಯರ್ ಜನ್ಮದಿನಾಚರಣೆ ಮರೆತ ಜಿಲ್ಲಾಡಳಿತ

ಮೈಸೂರು, ಜು.18-ನಾಡಿಗೆ ಅಪಾರ ಕೊಡುಗೆ ನೀಡಿದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮದಿನಾಚರಣೆಯನ್ನು ಜಿಲ್ಲಾಡಳಿತ ಮರೆತುಬಿಟ್ಟಿದೆ. ಇಂದು ಜಯಚಾಮರಾಜ ಒಡೆಯರ್ ಅವರ 99ನೆ ವರ್ಷದ ಜನ್ಮದಿನ. ಆದರೆ ಜಿಲ್ಲಾಡಳಿತವಾಗಲಿ, ಮೈಸೂರು ನಗರ ಪಾಲಿಕೆಯವರಾಗಲಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸಿಲ್ಲ. ನಗರದ ಹಾರ್ಡಿಂಜ್ ವೃತ್ತದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಆಳೆತ್ತರದ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಜನ್ಮ ದಿನದಂದಾದರೂ ಕನಿಷ್ಠ ಪ್ರತಿಮೆ ಆವರಣದ ಗ್ರಿಲ್ ಡೋರ್ ತೆಗೆದಿಲ್ಲ. ಪ್ರತಿಮೆ ಹಾಗೂ ಆವರಣ ಸ್ವಚ್ಛ ಪಡಿಸಿ ಒಂದು ಹಾರವನ್ನಾದರೂ ಹಾಕಿ ಗೌರವ ಸಲ್ಲಿಸಬಹುದಿತ್ತು. ಏನನ್ನೂ ಮಾಡದ ಜಿಲ್ಲಾಡಳಿತ ಹಾಗೂ ನಗರ ಪಾಲಿಕೆ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು ಅರಸು ಮಂಡಳಿಯವರು ಇಂದು ಒಡೆಯರ್ ಅವರ ಪುತ್ಥಳಿಗೆ ಹಾರ ಹಾಕಲು ಹೋದಾಗ ಗೇಟ್ ತೆರೆದಿರಲಿಲ್ಲ. ಹಾಗಾಗಿ ಗೇಟ್ ಮುಂಭಾಗ ಜಯಚಾಮರಾಜ ಒಡೆಯರ್ ಅವರ ಭಾವಚಿತ್ರವಿಟ್ಟು ಅದಕ್ಕೆ ಹಾರ ಹಾಕಿ ಗೌರ ಸಮರ್ಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ