ಲೀಡ್ಸ್ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ನಿರ್ಣಾಯಕ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ಗಳ ಸೋಲು ಅನುಭವಿಸಿ ಐತಿಹಾಸಿಕ ಸರಣಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಇದರೊಂದಿಗೆ ಇಂಗ್ಲೆಂಡ್ 2-1 ಅಂತರದಿಂದ ಸರಣಿ ಗೆದ್ದು ಬೀಗಿತು
ಲೀಡ್ಸ್ ಅಂಗಳದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೊಹ್ಲಿ ಪಡೆ ಎಡಗೈ ವೇಗಿ ಡೇವಿಡ್ ವಿಲ್ಲಿ ಮತ್ತು ಲೆಗ್ ಸ್ಪಿನ್ನರ್ ಆದೀಲ್ ರಶೀದ್ ದಾಳಿಗೆ ತತ್ತರಿಸಿ ಹೋಯಿತು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡುವಲ್ಲಿ ಎಡವಿದ್ರು. ರೋಹಿತ್ ಶರ್ಮಾ 2 ರನ್ ಗಳಿಸಿ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ನಾಯಕ ಕೊಹ್ಲಿ , ಧವನ್ ಜೊತೆಗೂಡಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ಎರಡನೇ ವಿಕೆಟ್ಗೆ 71 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದರೆ ರಶೀದ್ ದಾಳಿಗೆ ಕ್ಯಾಪ್ಟನ್ ಕೊಹ್ಲಿ, ಸುರೇಶ್ ರೈನಾ ಔಟಾಗಿ ಪೆವಿಲಿಯನ್ ಸೇರಿದ್ರು.
ನಂತರ ಬಂದ ಧೋನಿ 42, ಹಾರ್ದಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ತಲಾ 21 ರನ್ ಬಾರಿಸಿದ್ದರಿಮದ ತಂಡ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟ್ಕಕೆ 256 ರನ್ ಗಳಿಸಿತು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ ಮತ್ತು ರಶೀದ್ ಖಾನ್ ತಲಾ ಮೂರು ವಿಕೆಟ್ ಪಡೆದು ಮಿಂಚಿದ್ರು. ಟೀಂ ಇಂಡಿಯಾ ಕೊನೆಯಲ್ಲಿ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟ್ಕಕೆ 256 ರನ್ ಗಳಿಸಿತು.
257 ರನ್ಗಳ ಸವಾಲನ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ ಮನ್ ಜಾನಿ ಬೈರ್ ಸ್ಟೋ (30) ಅವರ ವಿಕೆಟ್ ಕಳದೆಕೊಂಡು ಆರಂಭಿಕ ಆಘಾತ ಅನುಭವಿಸಿತು. 27 ರನ್ ಗಳಿಸಿದ್ದ ಜೇಮ್ಸ್ ವಿನ್ಸ್ ರನೌಟ್ ಬಲೆಗೆ ಬಿದ್ರು. ನಂತರ ಬಂದ ನಾಯಕ ಇಯಾನ್ ಮಾರ್ಗನ್ ಜೋ ರೂಟ್ಗೆ ಉತ್ತಮ ಸಾಥ್ ನೀಡದ್ರು. ಈ ಜೋಡಿ ಮುರಿಯದ ಮೂರನೇ ವಿಕೆಟ್ಗೆ 186 ರನ್ಗಳ ಬೃಹತ್ ಜೊತೆಯಾಟ ನೀಡಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಜೋ ರೂಟ್ 120 ಎಸೆತ ಎದುರಿಸಿ 10 ಬೌಂಡರಿಯೊಂದಿಗೆ ಶತಕ ಬಾರಿಸಿ ಏದಿನ ಕ್ರಿಕೆಟ್ನಲ್ಲಿ 13ನೇ ಶತಕ ಬಾರಿಸಿದ ಸಾಧನೆ ಮಾಡಿದ್ರು. ನಾಯಕ ಇಯಾನ್ ಮಾರ್ಗನ್ ಅಜೇಯ 88 ರನ್ ಸಿಡಿಸಿದ್ರು. ಕೊನೆಯಲ್ಲಿ ಇಂಗ್ಲೆಂಡ್ 44.3 ಓವರ್ಗಳಲ್ಲಿ 2 ವಿಕೆಟ್ ನಷ್ಟ್ಕಕೆ 2060ರನ್ ಗಳಿಸಿ ಸರಣಿಯನ್ನ 2-1 ಅಂತರದಿಮದ ಗೆದ್ದುಕೊಂಡಿತು.