ಬೆಂಗಳೂರು,ಜು.18- ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಮಾನವತಾ ಸಂಸ್ಥೆಯಾಗಿರುವ ವಲ್ರ್ಡ್ ವಿಷನ್ ಇಂಡಿಯ 2021ರ ವೇಳೆಗೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರ್ಮೂಲನೆಯ ರಾಷ್ಟ್ರೀಯ ಅಭಿಯಾನವನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
ಅಭಿಯಾನದಲ್ಲಿ ಬಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರ್ಮೂಲನೆ ಕುರಿತಾದ ಸಂವಾದ ಮತ್ತು ಮಕ್ಕಳ ರಕ್ಷಣೆಯ ವಿಚಾರದಲ್ಲಿ ಎದುರಾಗುತ್ತಿರುವ ತೊಡಕುಗಳ ಬಗ್ಗೆ ಆತಂಕ ಮತ್ತು ಸಂಘಟಿತವಾಗಿ ಮಕ್ಕಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯತೆಗಳ ಕುರಿತಾಗಿ ಸಮಗ್ರವಾಗಿ ಚರ್ಚಿಸಲಾಯಿತು.
ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಪರಿಣಾಮ ಅವರಿಗೆ ಬಾರದಂತಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆಗಳನ್ನುಪರಿಹರಿಸುವುದು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ವಲ್ರ್ಡ್ ವಿಷನ್ ಇಂಡಿಯ ಈ ವಿನೂತನವಾದ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನ ಸುಮಾರು 10 ದಶಲಕ್ಷ ಮಕ್ಕಳ ಮೇಲೆ ಪರಿಣಾಮ ಬೀರಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಲ್ರ್ಡ್ ವಿಷನ್ ಇಂಡಿಯಾದ ಮಕ್ಕಳ ರಕ್ಷಣೆ ತಜ್ಞರಾದ ತಬಿತಾ ವಾಣಿ, ಮಕ್ಕಳ ಮೇಲಿನ ಹಿಂಸೆ ಮತ್ತು ದೌರ್ಜನ್ಯ ಮೂಲಭೂತ ಮತ್ತು ಮಕ್ಕಳ ಹಕ್ಕಿನ ಮೇಲಿನ ದೌರ್ಜನ್ಯ ಎಂದು ಭಾವಿಸಿದ್ದೇವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪರಿಣಾಮ ಅವರ ಜೀವನದ ಮೇಲೆ ಆರೋಗ್ಯ ಮತ್ತು ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂದರು.
ನಾವು ದೇಶದ 200 ಜಿಲ್ಲೆಗಳು, 7000ಕ್ಕೂ ಅಧಿಕ ನಗರ, ಅರೆನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಅಭಿಯಾನದ ಮೂಲಕ ಮಕ್ಕಳ ರಕ್ಷಣೆಗೆ ಪೂರಕವಾದ ವಾತಾವರಣವನ್ನು ಮೂಡಿಸುವ ಗುರಿ ಹಾಕಿಕೊಂಡಿದ್ದೇವೆ.
ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ವಾತಾವರಣ ನಿರ್ಮಾಣ ಮಾಡುತ್ತಿರುವ ನಮ್ಮ ಈ ಕಾರ್ಯದಲ್ಲಿ ಸಮಾಜದ ಎಲ್ಲ ಸ್ತರಗಳ ಜನರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಕನ್ಟಾಕ ರಾಜ್ಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವಾ ಅವರು ಈ ಅಭಿಯಾನವನ್ನು ಉದ್ಘಾಟಿಸಿದರು. ಇದೇ ವೇಳೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾಧಿಕಾರಿ ಡಾ.ಉಷಾ, ಮೈಸೂರು ರಸ್ತೆಯ ಬ್ಯಾಟರಾಯನಪುರದ ಸಹಾಯಕ ಪೆÇಲೀಸ್ ಆಯುಕ್ತ ಡಾ.ಪ್ರಕಾಶ್, ಯೂನಿಸೆಫ್ನ ಮಕ್ಕಳ ಹಕ್ಕು ರಕ್ಷಣೆ ವಿಶೇಷ ತಜ್ಞರಾದ ಸೋನಿ ಕಟ್ಟಿ, ಜಿಜಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಡಾ.ವೀಣಾ, ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್ನ ರಾಜೇಂದ್ರನ್,ಚೈಲ್ಡ್ ಫಂಡ್ನ ವ್ಯವಸ್ಥಾಪಕ ಸೆಲ್ವಿನ್ದಾಸ್,ಕ್ರೈಸ್ಟ್ವಿವಿಯ ಸಮಾಜ ಮತ್ತು ಸಮಾಜ ಸೇವೆ ವಿಭಾಗದ ಮುಖ್ಯಸ್ಥ ವಿಕ್ಟರ್ ಪೌಲ್ಮತ್ತು ಕ್ರಿಸ್ತು ಜಯಂತಿ ಕಾಲೇಜಿನ ಸಮಾಜಸೇವೆ ವಿಭಾಗದ ಮುಖ್ಯಸ್ಥ ಜೋನಸ್ ರಿಚರ್ಡ್ ಮತ್ತಿತರೆ ಗಣ್ಯರು ಇದ್ದರು.