ವಿಜಯಪುರ:ಜು-18: ಭೀಮಾತೀರದ ಹಂತಕ ಧರ್ಮರಾಜ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲಾಗುವುದೆಂದು ಉತ್ತರ ವಲಯ ಐಜಿಪಿ ಅಲೋಕ್ ಕುಮಾರ ತಿಳಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಆ ನಿಟ್ಟಿನಲ್ಲಿ ನಾವು ಈಗಾಗಲೇ ಪ್ರವೃತ್ತರಾಗಿದ್ದೇವೆ. ಸದ್ಯ ಅದು ನಕಲಿ ಎನ್ಕೌಂಟರ್ ಎಂದು ಯಾರೂ ನಮಗೆ ದೂರು ನೀಡಿಲ್ಲ. ಆದ್ರೆ ಆ ಬಗ್ಗೆ ಗಮನ ಹರಿಸಿದ್ದೇವೆ ಎಂದು ಈ ಮೂಲಕ ಧರ್ಮರಾಜ್ ಚಡಚಣ ಎನ್ಕೌಂಟರ್ ಕೇಸ್ ತನಿಖೆಯಾಗತ್ತೆ ಎಂದು ಪರೋಕ್ಷವಾಗಿ ಐಜಿಪಿ ಸುಳಿವು ಬಿಟ್ಟುಕೊಟ್ಟಿದ್ದಾರೆ.
ನಕಲಿ ಎನ್ಕೌಂಟರ್ ಬಗ್ಗೆ ನಾವು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಆದರೆ ತನಿಖೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡೆಸಲಾಗಲ್ಲವೆಂದರು. ಗಂಗಾಧರ ಹತ್ಯೆ ಪ್ರಕರಣದಲ್ಲಿ ಇಲಾಖೆಗೆ ಕೆಟ್ಟ ಹೆಸರು ಬಂದ ಕಾರಣ ನಮಗೂ ನೋವಾಗಿದೆ ಎಂದು ಐಜಿಪಿ ತೀವ್ರ ಬೇಸರ ವ್ಯಕ್ತಪಡಿಸಿದರು.
ರೌಡಿಗಳು ಸುಧಾರಣೆ ಆಗಬೇಕು, ಕಂಟ್ರೋಲ್ ನಲ್ಲಿ ಇರಬೇಕು.ಆ ನಿಟ್ಟಿನಲ್ಲಿ ನಾಳೆಯಿಂದ ಭೀಮಾತೀರದ ಭಾಗದಲ್ಲಿ ಅಪರಾಧ ತಡೆಯುವ ಕುರಿತು ಜಾಗೃತಿ ಮೂಡಿಸಲು ಇಲಾಖೆ ಮುಂದಾಗಲಿದೆ ಎಂದರು. ನಾಳೆ ಇಂಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಜನರೊಂದಿಗೆ ಸಭೆ ನಡೆಸಿ ಜಾಗೃತಿಗೆ ಪ್ರಯತ್ನಿಸಲಾ ಗುತ್ತದೆ. ಇನ್ನು ಜಿಲ್ಲೆಯಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ಪಡೆದು, ಅನವಶ್ಯಕವಾಗಿ ಶಸ್ತ್ರಾಸ್ತ್ರ ಪಡೆದವರ ಪರವಾನಿಗೆ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರು.
Bheema teera,Dharmaraj chadachana,encounter case