ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ಕೆರೆಯಲ್ಲಿ ಮುಳುಗಿ ನೀರು ಪಾಲಾಗಿದ್ದಾನೆ ಲಕ್ಷ್ಮೀಪತಿ (21) ಮೃತ ದುರ್ದೈವಿ ಮೃತ ಲಕ್ಷ್ಮೀಪತಿ ಪಾಲ್ ಪಾಲ್ ದಿನ್ನೆ ಗ್ರಾಮದ ನಿವಾಸಿಯಾಗಿದ್ದು ಬುಧವಾರ ಮಧ್ಯಾನ್ಹ ಕೆರೆಯಲ್ಲಿ ಒಬ್ಬನೆ ಈಜಲು ತೆರಳಿದ್ದಾನೆ ಕೆರೆಯ ನೀರಿನಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಈಜಲು ಯತ್ನಿಸಿದ್ದಾನೆ ಕೆರೆಯ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಈಜಲು ಸಾಧ್ಯವಾಗದೆ ಅಸ್ವಸ್ಥನಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಕೂಡಲೆ ಸ್ಥಳಿಯರು ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ ಮೃತಯುವಕನ ತಂದೆ ಲಿಂಗಪ್ಪ ಪೈಂಟಿಂಗ್ ಕೆಲಸ ಮಾಡುತ್ತಿದ್ದು ಲಕ್ಷ್ಮೀಪತಿ ಒಬ್ಬನೆ ಮಗನಾಗಿದ್ದ ಮಗನ ಸಾವಿನ ಸುದ್ಧಿ ತಿಳಿದ ತಂದೆ ತಾಯಿ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು ಈ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ