
ತುರುವೇಕೆರೆ, ಜು.17-ಟ್ರ್ಯಾಕ್ಟರ್ ಮಗಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಕಸಂದ್ರ ಬಳಿ ನಡೆದಿದೆ. ಬೀರಸಂದ್ರ ಪಾಳ್ಯದ ವಿಶ್ವನಾಥ್ (39) ಮೃತಪಟ್ಟ ಚಾಲಕ.
ನಿನ್ನೆ ಬೆಳಿಗ್ಗೆ ತೋಟದಲ್ಲಿ ಉಳುವೆ ಮಾಡಲು ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದಾಗ ರಸ್ತೆಯ ದೊಡ್ಡ ಗುಂಡಿಯ ಬಳಿ ಚಲಿಸುವಾಗ ಆಯತಪ್ಪಿ ಟ್ರ್ಯಾಕ್ಟರ್ ಮಗುಚಿ ಬಿದ್ದು ಚಾಲಕ ಟ್ಯಾಕ್ಟರ್ ಅಡಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಗಮನಿಸಿ ಕೂಡಲೇ ಪೆÇಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಿಎಸ್ಐ ಶಟ್ಟಳಪ್ಪ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.