ಅನಧಿಕೃತ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ: ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್

 

ಬೆಂಗಳೂರು, ಜು.17- ಬೆಂಗಳೂರಿನಲ್ಲಿ ರೆಕಾರ್ಡ್ ಮತ್ತು ಲೈವ್ ಮ್ಯೂಜಿಸಿ ಬಳಸುವ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ನೋಟಿಸ್ ನೀಡಲಾಗಿದ್ದು, ಅನಧಿಕೃತವಾದ ಲೈವ್‍ಬ್ಯಾಂಡ್ ಮತ್ತು ನೈಟ್‍ಕ್ಲಬ್‍ಗಳಿಗೆ ಕಡಿವಾಣ ಹಾಕಲಾಗುವುದು ಎಂದು ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಕ್ಲಬ್‍ಗಳು ಸೇರಿ ಸುಮಾರು 400 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಂಗೀತ ಬಳಸುವ ಅಥವಾ ಲೈವ್‍ಬ್ಯಾಂಡ್ ನಡೆಸುವ ಸಂಸ್ಥೆಗಳು ಪೂರ್ವಾನುಮತಿ ಪತ್ರ, ಬಿಬಿಎಂಪಿಯಿಂದ ಸ್ವಾಧೀನ ಪತ್ರ ಸೇರಿದಂತೆ ಸುಮಾರು ಐದಾರು ಪ್ರಮುಖ ದಾಖಲಾತಿಗಳನ್ನು ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಆದೇಶದನ್ವಯ ಅಧಿಕೃತ ಪರವಾನಗಿ ನೀಡಲಾಗುವುದು. ಒಂದು ವೇಳೆ ಪರವಾನಗಿ ಇಲ್ಲದೇ ಇದ್ದರೆ ಅವುಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೀತಾವಿಷ್ಣು ಕೊಲೆ ಪ್ರಕರಣದಲ್ಲಿ ಆರೋಪಿ ಕಾನೂನಿನ ವಶದಲ್ಲಿ ಇರಲಿಲ್ಲ. ಆದರೆ, ಆತನ ಮೇಲೆ ಪೆÇಲೀಸರು ನಿಗಾ ಇರಿಸಿದ್ದರು. ಚಿಕಿತ್ಸೆಗಾಗಿ ದಾಖಲಾತಿದ್ದ ಆತನನ್ನು ಹಿಂಬಾಗಿಲ ಮೂಲಕ ತಪ್ಪಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಬಂಧಿಸಿದ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷೆ ಮಾಡಲಾಗುತ್ತಿದ್ದು, ಅದು ಕೈ ಸೇರಿದ ಬಳಿಕ ಚಾರ್ಜ್ ಶೀಟ್ ಸಲ್ಲಿಸುವುದಾಗಿ ಅವರು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ