ಸೈಕಲ್ ರವಿ ಕರೆ ಪ್ರಕರಣ ತನಿಖೆ ಆಗಲೇ ಬೇಕು- ಶೆಟ್ಟರ

ಹುಬ್ಬಳ್ಳಿ:-‌ ರೌಡಿ ಶೀಟರ್ ಸೈಕಲ್‌ ರವಿ ಹಾಗೂ ಮಾಜಿ ಸಚಿವ ಎಂ‌.ಬಿ ಪಾಟೀಲ್ ಮೊಬೈಲ್ ನಲ್ಲಿ ಮಾತುಕತೆ ನಡೆಸಿರೋ ಪ್ರಕರಣವನ್ನು ತನಿಖೆ ಮಾಡಬೇಕೆಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಯೊಂದಿಗೆ ಮಾತನಾಡಿದ ಜಗದೀಶ್ ‌ಶೆಟ್ಟರ್ ಕೇವಲ ಒಂದೆರೆಡು ಭಾರಿ ಕಾಲ್ ಬಂದಿದ್ರೆ ಅದು ಸುಮ್ಮನೇ ಇರಬಹುದು.ಆದ್ರೆ 80 ಕ್ಕೂ ಹೆಚ್ಚು ಸಾರಿ ಕಾಲ್ ಬಂದಿದ್ದು ಹೇಗೆ ಹಾಗಾಗಿ ನಿಷ್ಪಕ್ಷಪಾತ ತನಿಖೆ ಮಾಡೋದು ಅಗತ್ಯಯಿದೆ. ಈ ಕುರಿತು ಎಂ. ಬಿ ಪಾಟೀಲ್ ಸ್ಪಷ್ಟನೆ ನೀಡಬೇಕು ಗೃಹ ಸಚಿವರು ಹಾಗೂ ಸಿ ಎಂ ಕುಮಾರಸ್ವಾಮಿ ಅವರು ಪ್ರಕರಣ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯ ಮಾಡಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ