
ಹುಬ್ಬಳ್ಳಿ-ಮಹಾರಾಷ್ಟ್ರದಲ್ಲಿ ನಂದಿನಿ ಹಾಲನ್ನು ರಸ್ತೆಗೆ ಚೆಲ್ಲಿ ವಾಹನ ಚಾಲಕರ ಮೇಲೆ ನಡೆಸಿದ ಹಲ್ಲೆಯನ್ನ ಖಂಡಿಸಿ ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿರುವ ಮಹಾರಾಷ್ಟ್ರದ ಭಾರತ್ ಡೈರಿ ಏಜೆನ್ಸಿ ಮುಂದೆ ಪ್ರತಿಭಟನೆ ಮಾಡಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಏಜೇನ್ಸಿ ಬೋರ್ಡ್ ಗೆ ಹಾಗೂ ಮಹಾರಾಷ್ಟ್ರ ಮೂಲದ ಹಾಲಿನ ವಾಹನಕ್ಕೆ ಕೆಸರು ಬಳಿದು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ನಂದಿನಿ ಹಾಲನ್ನು ರಸ್ತೆಗೆ ಚೆಲ್ಲಿದ ಮಹಾರಾಷ್ಟ್ರ ಹಾಲು ಒಕ್ಕೂಟದ ನಡೆ ಖಂಡನೀಯವಾಗಿದೆ. ಮಹಾರಾಷ್ಟ್ರ ಹಾಲು ಒಕ್ಕೂಟ ಮಂಡಳಿಯಿಂದ ಮಲತಾಯಿ ಧೋರಣೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಹಾರಾಷ್ಟ್ರ ಹಾಲಿನ ಒಕ್ಕೂಟ ಮಂಡಳಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.