ಡೆಹ್ರಾಡೂನ್, ಜು.17-ಮೊಬೈಲ್ ಫೆÇೀನ್ನಲ್ಲಿ ಅಶ್ಲೀಲ ಸಿನಿಮಾ ನೋಡಿದ ನಂತರ ಐವರು ಬಾಲಕರು 8 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಘಟನೆ ಉತ್ತರಾಖಂಡದ ವಿಶ್ವವಿಖ್ಯಾತ ಗಿರಿಧಾಮ ಡೆಹ್ರಾಡೂನ್ನ ಸಹಸ್ಪುರ್ನಲ್ಲಿ ನಡೆದಿದೆ.
ಸ್ಮಾರ್ಟ್ಫೆÇೀನ್ ಮತ್ತು ಅಶ್ಲೀಲ ಸಿನಿಮಾಗಳಿಂದ ಸಮಾಜದಲ್ಲಿ ಏನೆಲ್ಲ ಹೀನ ಕೃತ್ಯಗಳು ನಡೆಯುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. 9 ರಿಂದ 14 ವರ್ಷದ ಬಾಲಕರು ಈ ನೀಚ ಕೃತ್ಯ ಎಸಗಿದ್ದು, ಘಟನೆಯಿಂದ ಜನರು ಬೆಚ್ಚಿ ಬೀಳುವಂತಾಗಿದೆ.
ಈ ಎಲ್ಲ ಐವರು ಬಾಲಕರನ್ನು ವಶಕ್ಕೆ ತೆಗೆದುಕೊಂಡು ರಿಮ್ಯಾಂಡ್ ಹೋಮ್ಗೆ ಕಳುಹಿಸಲಾಗಿದೆ.
ಬಾಲಕನೊಬ್ಬನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಐವರು ಮೊಬೈಲ್ ಫೆÇೀನ್ನಲ್ಲಿ ಬ್ಲೂ ಫಿಲಂ ನೋಡಿದರು. ನಂತರ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆ ತಂದು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಪೆÇಲೀಸರು ತಿಳಿಸಿದ್ದಾರೆ.
ಸ್ಮಾರ್ಟ್ ಫೆÇೀನ್ನ ಇಂಟರ್ನೆಟ್ನಲ್ಲಿ ಆಗಾಗ ಅಶ್ಲೀಲ ಚಿತ್ರಗಳನ್ನು ನೋಡುವ ದುಶ್ಚಟ ಹೊಂದಿದ್ದ ಈ ಬಾಲಕರು ಕೆಲವು ದಿನಗಳ ಹಿಂದೆಯ ಇಂಥ ಕೃತ್ಯ ನಡೆಸಲು ಉದ್ದೇಶಿ ಸಮಯಕ್ಕಾಗಿ ಕಾಯುತ್ತಿದ್ದರು. ಪಕ್ಕದ ಮನೆಯ ಬಾಲಕಿ ಮೇಲೆ ಇವರ ವಕ್ರದೃಷ್ಟಿ ಬಿದ್ದು, ಈ ಘಟನೆ ನಡೆದಿದೆ ಎಂದು ಸಹಸ್ಪುರ್ ಪೆÇಲೀಸ್ ಠಾಣೆ ಇನ್ಸ್ಪೆಕ್ಟರ್ ನರೇಶ್ ರಾಥೋಡ್ ತಿಳಿಸಿದ್ದಾರೆ. ತನ್ನ ಮೇಲೆ ನಡೆದ ಕೃತ್ಯವನ್ನು ಬಾಲಕಿಯು ಪೆÇೀಷಕರಿಗೆ ತಿಳಿಸಿದ ನಂತರ ದೂರನ್ನು ಆಧರಿಸಿ ಐವರನ್ನು ಬಂಧಿಸಿ ಪೆÇೀಕ್ಸೊ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.