ಚೆನ್ನೈ:ಜು-17: 11 ವರ್ಷದ ಬಾಲಕಿ ಮೇಲೆ 22 ಜನ ಕಾಮುಕರು ನಿರಂತರವಾಗಿ ಅತ್ಯಾಚಾರ ನಡೆಸಿ, ಕೃತ್ಯವನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಭಯಾನಕ ಘಟನೆ ಚೆನ್ನೈನ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಳಕಿಗೆ ಬಂದಿದೆ.
ಅಪಾರ್ಟ್ಮೆಂಟ್ನಲ್ಲಿದ್ದ 11 ವರ್ಷದ ಬಾಲಕಿಗೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್ ಹಾಗೂ ವಾಟರ್ ಸಪ್ಲೈರ್ಸ್ ಸೇರಿದಂತೆ ಒಟ್ಟು 22 ಕಾಮುಕರು ಬಾಲಕಿ ಮೇಲೆ ಹಲವು ಬಾರಿ ಬಲತ್ಕಾರ ಎಸಗಿದ್ದಾರೆ.
ಈ 22 ಕಾಮುಕರ ಪೈಕಿ 18 ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದ್ದಾರೆ.
ಚೆನ್ನೈನ ಪಿರಸವಾಲ್ಕಂ ಅಪಾರ್ಟ್ಮೆಂಟ್ನಲ್ಲಿ 7ನೇ ತರಗತಿ ಬಾಲಕಿ ಮೇಲೆ 7 ತಿಂಗಳಿಂದ ನಿರಂತರವಾಗಿ ಬಲತ್ಕಾರ ಎಸಲಾಗುತ್ತಿತ್ತು. ಇಂಜೆಕ್ಷನ್ ಹಾಗೂ ಮತ್ತು ಬರಿಸುವ ಪಾನೀಯವನ್ನು ಕುಡಿಸಿ ಬಾಲಕಿ ಮೇಲೆ ಕೃತ್ಯ ಎಸಲಾಗುತ್ತಿತ್ತು. ಅಲ್ಲದೇ, ಈ ಕೀಚಕರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಂತ್ರಸ್ತ ಬಾಲಕಿಗೆ ಬೆದರಿಕೆವೊಡಿದ್ದರು. ಹೀಗೆ ಸತತ 7 ತಿಂಗಳುಗಳ ಕಾಲ ಕಾಮುಕರು ಬಾಲಕಿ ಮೇಲೆ ಕೃತ್ಯ ಎಸಗಿದ್ದಾರೆ.
ಈ ನಡುವೆ ದೆಹಲಿಯಲ್ಲಿ ಓದುತ್ತಿರುವ ತನ್ನ ಹಿರಿಯ ಸಹೋದರಿ ಮನೆಗೆ ಬಂದಿದ್ದು, ಶನಿವಾರ ಕಾಮುಕರು ಅಟ್ಟಹಾಸವನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದಾಳೆ. ಅಂತೆಯೇ ಹಿರಿಯ ಸಹೋದರಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ 22 ಕಾಮುಕರ ಪೈಕಿ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಅಪಾರ್ಟ್ಮೆಂಟ್ 300 ಫ್ಲಾಟ್ಗಳಿಂದ ಕೂಡಿದ್ದು, ಮೊದಲ ಬಾರಿಗೆ ಲಿಫ್ಟ್ ಆಪರೇಟರ್ ಆಗಿದ್ದ 66 ವರ್ಷದ ರವಿ ಕುಮಾರ್ ಎಂಬುವವ ಬಾಲಕಿ ಮೇಲೆ ಎರಗಿದ್ದ. ಇದಾದ ಮೂರು ದಿನಗಳ ಬಳಿಕ ಇತರ ಇಬ್ಬರು ಕುಡುಕರ ಜೊತೆ ಬಂದು ಕೃತ್ಯ ಎಸಗಿದ್ದ. ನಂತರ ಹೀಗೆ ಇತರ ಕಾಮುಕರು ಸೇರಿಕೊಂಡು ನಿರಂತರವಾಗಿ ಬಲತ್ಕಾರ ನಡೆಸಿದ್ದರು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಆಕೆ ಮೇಲೆ ಹಲವು ಬಾರಿ, ಹಲವು ಜನ ಬಲತ್ಕಾರ ಎಸಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
11-year-old girl gang raped by 22 for 7 months in Chennai; 18 men including security guards arrested