ಹೊಸ ಪಂಪ್ ಮೋಟಾರ್‍ಯಿಂದ ನೀರಿನ ಹರಿವು ದ್ವಿಗುಣ

Varta Mitra News

ಕೋಲಾರ,ಜು.16- ಜಿಲ್ಲೆಯ ಪ್ರಥಮ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯಡಿ ಒಂದು ನೀರೆತ್ತುವ ಪಂಪ್‍ಮೋಟಾರ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ಮತ್ತೊಂದು ನೀರೆತ್ತುವ ಪಂಪ್ ಮೋಟಾರ್ ಕಾರ್ಯ ಆರಂಭಿಸಿರುವುದರಿಂದ ನೀರಿನ ಹರಿವು ದ್ವಿಗುಣಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಹೇಳಿದರು. ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಕೆರೆ ವೀಕ್ಷಿಸಿ ಮಾತನಾಡಿದ ಅವರು, ಮಾಡಿದ ಕೆಲಸ ಫಲಕಾರಿಯಾದರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ. ಇಷ್ಟು ದಿನ 100 ಎಂಎಲ್‍ಟಿ ನೀರು ಹರಿಯುತ್ತಿತ್ತು. ಇದೀಗ ನೀರು ಹರಿಸಲು ಯಾವುದೇ ಅಡೆತಡೆಗಳಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ರಾಜಕಾಲುವೆಯನ್ನು ಸ್ವಚ್ಚಗೊಳಿಸಿ ಒತ್ತುವರಿಗಳನ್ನು ತೆರವು ಮಾಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಕೆ.ಸಿ.ವ್ಯಾಲಿ ಅಂತರ್ಜಲ ವೃದ್ದಿಸಲು ಅನುಕೂಲವಾಗಲಿದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಯೋಜನೆ ಪ್ರಾರಂಭವಾಗಿರುವ ಲಕ್ಷ್ಮಿಸಾಗರ ಕೆರೆ ಸುತ್ತಮುತ್ತ ಇರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ 200 ಎಂಎಲ್‍ಟಿ ನೀರು ಹರಿಯಲು ಪ್ರಾರಂಭವಾಗಿದೆ ಎಂದರು.
ಯೋಜನೆಗೆ 1345 ಕೋಟಿ ವೆಚ್ಚ ಮಾಡಲಾಗಿದ್ದು, ಚಲಘಟ್ಟ -ಬೆಳ್ಳಂದೂರು ಕೆರೆಗಳಿಂದ ಶುದ್ಧಿಕರಿಸಿದ ನೀರು ಪೈಪ್‍ಲೈನ್ ಮೂಲಕ ಹರಿದುಬರುತ್ತಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಅತಿ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿಂದನೀರು ಪಂಪ್ ಮಾಡಲು ಬೊಟ್ಟು 4 ಮೋಟಾರ್‍ಗಳನ್ನು ಅಳವಡಿಸಲಾಗಿದೆ. ಈಗ ಎರಡು ಮೋಟಾರ್‍ಗಳು ಕರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ 126 ಕೆರೆಗಳಿಗೆ ಉದ್ಯಾನವನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಾಲಹಳ್ಳಿ ಗೋವಿಂದಗೌಡ, ಮುಖಂಡರಾದ ಯಲವಳ್ಳಿ ರಮೇಶ್, ಕೋಚಿಮಲ್ ಅಧ್ಯಕ್ಷ ಬ್ಯಾಟಪ್ಪ ಮತ್ತಿತರ ನಾಯಕರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ