ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಟೆನ್ನಿಸ್ ಕಿರೀಟಕ್ಕೆ ಸರ್ಬಿಯಾದ ನೊವಾಕ್ ಜೊಕೋವಿಕ್ ಮತ್ತೊಮ್ಮೆ ಮುತ್ತಿಕ್ಕಿದ್ದಾರೆ. ಈ ಮೂಲಕ ನಾಲ್ಕನೇ ವಿಂಬಲ್ಡನ್ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ವಿಂಬಲ್ಡನ್ ಫೈನಲ್ ಕದನದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ಅವರನ್ನು ಜೊಕೋವಿಕ್ ಸೋಲಿಸಿದರು.
6-2, 6-2, 7-6 (7-3) ಸೆಟ್ಗಳ ಅಂತರದಿಂದ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಲ್ಲದೇ ಸೆಮಿಫೈನಲ್ನಲ್ಲಿ ದಾಖಲೆಯ ಆಟಕ್ಕೆ ಸಾಕ್ಷಿಯಾಗಿದ್ದ ಆಂಡರ್ಸನ್ ವಿರುದ್ಧ ಜೊಕೋವಿಕ್ ಜಯ ಸಾಧಿಸಿದರು.
ಜೊಕೋವಿಕ್ ಗೆ ಇದು 13ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ. ಈ ಮೂಲಕ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಆಟಗಾರರ ಪಟ್ಟಿಯಲ್ಲಿ ಜೊಕೋವಿಕ್ ನಾಲ್ಕನೇ ಸ್ಥಾನ ಪಡೆದರು.