ಮಹದಾಯಿ ಇತ್ಯರ್ಥಕ್ಕೆ ಆಗ್ರಹ

ಹುಬ್ಬಳ್ಳಿ- ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿ ಹೋರಾಟ ಮೂರು ವರ್ಷ ಪೂರೈಸಿದರೂ ನ್ಯಾಯ ಸಿಕ್ಕಿಲ್ಲ. ಕೂಡಲೇ ಪ್ರಧಾನಿಗಳು ಮಧ್ಯ ಪ್ರವೇಶಿಸಿ ಮಹದಾಯಿ ವಿವಾದ ಬಗೆಹರಿಸಬೇಕೆಂದು ಉತ್ತರ‌ ಕರ್ನಾಟಕ ರೈತ ಸಂಘದ ಮುಖಂಡರ ಸೋಮಶೇಖರ ಕೋತಂಬರಿ ಆಗ್ರಹಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧಿಕರಣದ ಹೊರಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಉತ್ತರ ಕರ್ನಾಟಕ ಭಾಗದ ಸಂಸದರು ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕು. ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಸಿದ ಅವರು,
ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ‌. ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಕುರಿತು ಡಾ. ಪಾಟೀಲ್ ಪುಟ್ಟಪ್ಪನವರ ಜೊತೆ ಚರ್ಚಿಸಿದ್ದೇವೆ. ಆಗಸ್ಟ್ ಎರಡರಂದು ಉತ್ತರ ಕರ್ನಾಟಕ ಸಂಪೂರ್ಣ ಬಂದ್‌ಗೆ ಕರೆ. ವಿವಿಧ ಸಂಘ- ಸಂಸ್ಥೆಗಳ ನೇತ್ರತ್ವದಲ್ಲಿ 13 ಜಿಲ್ಲೆಗಳಲ್ಲಿ ಬಂದ್ ಮಾಡಲಾಗುವುದು ಎಂದರು. ರೈತ ಮುಖಂಡರಾದ, ಮಹದೇವಪ್ಪ ಉರಳೇಗಡ್ಡೆ, ಅಡಿವೆಪ್ಪ ಆಲದಕಟ್ಟಿ, ಬಸವರಾಜ ಕರಿಗಾರ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ