ಹು-ಧಾ ಪಾಲಿಕಯಲ್ಲಿ ನಕಲಿ ಪೌರ ಕಾರ್ಮಿಕರ ದೌರ್ಜನ್ಯ – ವಿಜಯ ಗುಂಟ್ರಾಳ

ಹುಬ್ಬಳ್ಳಿ- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಕಲಿ ಪೌರ ಕಾರ್ಮಿಕರು ತುಂಬಿದ್ದಾರೆಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದ್ದಾರೆ. ಪಾಲಿಕೆ ಗುತ್ತಿಗೆದಾರರು ತಮ್ಮ ಸಂಬಂಧಿಗಳನ್ನ ಪಾಲಿಕೆಯಲ್ಲಿ ಕೆಲಸಕ್ಕೆ ಸೇರಿಸಿದ್ದಾರೆ. ನೇರ ವೇತನ ಆದೇಶ ಹಿರ ಬಂದನಂತರ ನಕಲಿ ಕಾರ್ಮಿಕರು ವಾರ್ಡಗಳಿಗೆ ಬಂದು ಬಯೋ ಮೆಟ್ರಿಕ್ ಹಾಜರಾತಿ ಹಾಕುತ್ತಿದ್ದಾರೆ. ಇಷ್ಟು ವರ್ಷಗಳಕಾಲ ಸೇವೆಗೆ ಬರದ ಇವರುಗಳು, ಇತ್ತೀಚೆಗಷ್ಟೇ ಕೆಲಸಕ್ಕೆ ಬರುತ್ತುದ್ದಾರೆ. ಈ ಅಕ್ರಮವನ್ನ ವಿರೋಧ ಮಾಡಿದ ಪೌರ ಕಾರ್ಮಿಕರ ಮೇಲೆ ಹಲ್ಲೆ ಯತ್ನ ನಡೆದಿವೆ ಎಂದು ಹೇಳಿದರು. ನಕಲಿ ಪೌರ ಕಾರ್ಮಿಕರು ಮಾರಕಾಸ್ತ್ರಗಳನ್ನ ಹಿಡುದು ಓಡಾಡುತ್ತಿದ್ದಾರೆ. ಇದರಿಂದ ನಿಜವಾದ ಪೌರಕಾರ್ಮಿಕರು ಅಭದ್ರತೆಯಿಂದ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪಾಲಿಕೆ ಅಧಿಕಾರಿಗಳು ಸಹ ನಕಲಿ ಪೌರ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆಂದು ವಿಜಯ ಗುಂಟ್ರಾಳ ಆರೋಪಿಸಿದರು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಾಮನ್ಯ ಸಭೆಯಲ್ಲಿ ಹಾಗೂ ಸರ್ಕಾರದಿಂದ ಹೊರಡಿಸಿದ ಆದೇಶಕ್ಕೂ ಪಾಲಿಕೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂದು ಪಲಿಕೆ ಆಯುಕ್ತರ ಮೇಲೆ ಗಂಭೀರ ಆರೋಪ ಆರೋಪ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ