![IMG_20180716_081038](http://kannada.vartamitra.com/wp-content/uploads/2018/07/IMG_20180716_081038-508x381.jpg)
ಹುಬ್ಬಳ್ಳಿ- ಪ್ರೀಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಘಟನೆ ಹಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬಲ್ಡೋಜರ್ ನಗರದ ನಿವಾಸಿ, ಮಹ್ಮದ ರಫೀಕ್ ಆಯಟ್ಟಿ ಕೊಲೆಯಾದ ದುರ್ದೈವಿ 40 ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ಮಾರಡಗಿ ರಸ್ತೆಯಲ್ಲಿ ಜುಲೈ 11 ರಂದು ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣದ ಬನ್ನತ್ತಿದ ನವನಗರ ಪೊಲೀಸರು ಕೊಲೆಗಾರರನ್ನ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆಯಾದವನ ಪತ್ನಿ ಶಬಾನಾ ಆಯಟ್ಟಿ ಹಾಗೂ ಪ್ರೀಯಕರ ಬಾಷಾಸಾಬ್ ಧಾರವಾಡ ಬಂಧಿಸಿದ್ದಾರೆ. ವಿಚಾರಣೆ ವೇಳೆ, ಶಬನಾ ಹಾಗೂ ಬಾಷಾಸಾಬ್ ನಡುವೆ ಅನೈತಿಕ ಸಂಬಂಧ ವಿದ್ದು, ಜೂನ್ 11 ರಂದು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ. ತನಿಖೆ ವೇಳೆ ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಲೆ ಮಾಡಿರೋದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.