
ಬೆಂಗಳೂರು, ಜು.16- ಹಾಡ ಹಗಲೇ ಮನೆಯೊಂದಕ್ಕೆ ನುಗ್ಗಿದ ಡಕಾಯಿತರು ಕುಟುಂಬದವರನ್ನು ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ, ಆಭರಣ ಹಾಗೂ ಮೊಬೈಲ್ ಅನ್ನು ದೋಚಿರುವ ಘಟನೆ ಹುಳಿಮಾವು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲ್ಲೇನಹಳ್ಳಿಯ ನಿವಾಸಿ ಪ್ರಭಾಕರ್ ಎಂಬುವರು ನಿನ್ನೆ ಸಂಜೆ 5 ಗಂಟೆ ಸಮಯದಲ್ಲಿ ಮನೆಯ ಹಾಲ್ನಲ್ಲಿ ಕುಳಿತಿದ್ದರು.
ಈ ಸಂದರ್ಭದಲ್ಲಿ ಆರೇಳು ಮಂದಿ ಇದ್ದ ದರೋಡೆಕೋರರ ತಂಡ ಬಲವಂತವಾಗಿ ಬಾಗಿಲನ್ನು ತಳ್ಳಿಕೊಂಡು ಒಳಗೆ ನುಗ್ಗಿದೆ.
ಏಕಾಏಕಿ ಮಾರಕಾಸ್ತ್ರಗಳನ್ನು ತೆಗೆದು ಪ್ರಭಾಕರ್ ಹಾಗೂ ಮನೆಯವರನ್ನು ಕಿರುಚಾಡದಂತೆ ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ 6 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಈ ಸಂಬಂಧ ಪ್ರಭಾಕರ್ ಅವರು ಹುಳಿಮಾವು ಠಾಣೆಗೆ ದೂರು ನೀಡಿದ್ದಾರೆ.