![sqlogo1000x](http://kannada.vartamitra.com/wp-content/uploads/2018/03/sqlogo1000x-381x381.png)
ಢಾಕಾ, ಜು.15- ಬಾಂಗ್ಲಾ ದೇಶದ ಐವರು ಪ್ರತಿಭಾವಂತ ಯುವ ಫುಟ್ಬಾಲ್ ಆಟಗಾರರು ಜಲ ಸಮಾಧಿಯಾಗಿರುವ ಘಟನೆ ದೇಶದ ವಾಯುವ್ಯ ಭಾಗದಲ್ಲಿರುವ ನದಿಯೊಂದರಲ್ಲಿ ಸಂಭವಿಸಿದೆ.
ಅರ್ಜೆಂಟೀನಾ ಮತ್ತು ಬ್ರೆಜಿಲ್ ತಂಡದ ಬೆಂಬಲಿಗರ ಜತೆ ಸೌಹಾರ್ದ ಪಂದ್ಯ ಆಡಿದ ನಂತರ ಬಾಂಗ್ಲಾ ಫುಟ್ಬಾಲ್ ಆಟಗಾರರ ತಂಡ ನದಿಯಲ್ಲಿ ಜಲ ವಿಹಾರದಲ್ಲಿ ತೊಡಗಿದ ವೇಳೆ ಈ ದುರಂತ ಸಂಭವಿಸಿತು.
ಥೈಲ್ಯಾಂಡ್ನಲ್ಲಿ 12 ಬಾಲಕರು ಗುಹೆಯೊಂದರಲ್ಲಿ ಸಿಲುಕಿ 18 ದಿನಗಳ ನಂತರ ಅಪಾಯದಿಂದ ಪಾರಾದ ಘಟನೆ ನಂತರ ಈ ದುರಂತ ನಡೆದಿದೆ.