ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ – ಡಾ. ಪಾಟೀಲ ಪುಟ್ಟಪ್ಪ

ಧಾರವಾಡ, ಜು.15- ರಾಜ್ಯದಲ್ಲಿ ಆಡಳಿತ ಇರುವುದು ಮೈಸೂರು ಸರ್ಕಾರ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆರೋಪ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಂತೆ ಮೈಸೂರು ಪ್ರದೇಶದ ಭಾಗಗಳು ಎಷ್ಟು ಅಭಿವೃದ್ದಿಯಾಗಿವೆ ಎನ್ನುವುದರ ಬಗ್ಗೆ ಹಾಗೂ ನಂಜುಡಪ್ಪ ವರದಿ ಸೇರಿ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸುವಂತೆ ಸಿಎಂಗೆ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಇಂದಿಲ್ಲಿ ಹೇಳಿದರು.
ನಗರದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೆ ಯಾರ-ಯಾರ ಕಾಲದಲ್ಲಿಏನೇನೋ ಮಾಡಿದ್ದಾರೆ ಈಗ ಎರಡು ತಿಂಗಳಲ್ಲಿ ಕುಮಾರಸ್ವಾಮಿ ರಾಜ್ಯವನ್ನು ಮೈಸೂರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ರಾಜ್ಯವನ್ನು ಇಲ್ಲಿಯವರೆಗೆ 26 ವರ್ಷ ಲಿಂಗಾಯತರು ಈ ರಾಜ್ಯ ಆಳಿದ್ದಾರೆ. ರಾಮಕೃಷ್ಣ ಹೆಗಡೆ ಮತ್ತು ದೇವರಾಜ ಅರಸು ಕೆಲ ವರ್ಷ ಆಳಿದ್ದಾರೆ. ಉಳಿದಂತೆ ಇನ್ನು ಕೆಲವರೂ ಆಡಳಿತ ಮಾಡಿದ್ದಾರೆ. ಆದರೆ ದೇವೇಗೌಡರ ಪುತ್ರ ಈಗಷ್ಟೇ ಸಿಎಂ ಆಗಿದ್ದಾರೆ. ಈ ಭಾಗದಲ್ಲಿ ಅವರು ಏನೂ ಮಾಡಿಲ್ಲ ಅನ್ನೂ ಚರ್ಚೆ ಬೇಡವೆಂದರು. ಈಗಿರುವ ಅಸಮಾಧಾನ ತಿಳಿಯಲು ಅಂಕಿ ಸಂಖ್ಯೆಗಳ ಮೇಲೆ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಸಿಎಂಗೆ ಹೇಳಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ದೇವರಾಜ ಕಂಬಳಿ, ಶಾಂತವೀರ ಬೇಟಗೇರಿ, ರಾಜು ಅಂಬೂರೆ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ