ಲಾರ್ಡ್ಸ್: ಸ್ಫೋಟಕ ಬ್ಯಾಟ್ಸ್ ಮನ್ ಜೋ ರೂಟ್ ಅವರ ಆಕರ್ಷಕ ಶತಕ ಮತ್ತು ಲಿಯಾಮ್ ಪ್ಲಾಂಕೆಂಟ್ ದಾಲಿಗೆ ತತ್ತರಿಸಿದ ಟೀಂ ಇಂಡಿಯಾ ಆತಿಥೇಯ ಆಂಗ್ಲರ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 86 ರನ್ಗಳ ಸೋಲನ್ನ ಕಂಡು ಕ್ರಿಕೆಟ್ ಕಾಶಿಯಲ್ಲಿ ಐತಿಹಾಸಿಕ ಸರಣಿ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಇದರೊಂದಿಗೆ ಆಂಗ್ಲರು ಸರಣಿಯಲ್ಲಿ 1-1 ಸಮಬಲ ಸಾಧಿಸಿತು.
ಆಕರ್ಷಕ ಶತಕ ಬಾರಿಸಿದ ಜೋ ರೂಟ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು ಜೋ ರೂಟ್ ಅವರ ಆಕರ್ಷಕ 113 ರನ್ಗಳ ಶತಕದ ನೆರವಿನಿಂದ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿತು. ಜೋ ರೂಟ್ 116 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನ ಎಬದಲಿಸಿದ್ರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಇಯಾನ್ ಮಾರ್ಗನ್ 53, ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಆಲ್ರೌಂಡರ್ ಡೇವಿಡ್ ವಿಲ್ಲಿ ಅರ್ಧ ಶತಕ ಬಾರಿಸಿ ತಂಡದ ಮೊತ್ತ 300ರ ಗಡಿ ದಾಟಿಸುಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ರು.
ಜೋ ರೂಟ್ 116 ಎಸೆತದಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್ ನೆರವಿನಿಮದ 113 ರನ್ ಗಳಿಸಿ ಕೊನೆಯ ಎಸೆತದಲ್ಲಿ ರನೌಟ್ ಆದ್ರು. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ರು.
ಎಡವಿ ಬಿದ್ದ ಟೀಂ ಇಂಡಿಯಾ
323 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ ಆರಂಭಿಕ ಬ್ಯಾಟ್ಸ್ ಮನ್ಗಳಾದ ಶಿಖರ್ ಧವನ್ (36), ರೋಹಿತ್ ಶರ್ಮಾ (15) ವಿಕೆಟ್ಗಳನ್ನ ಕಳೆದುಕೊಂಡು ಸಂಕಷಟದಲ್ಲಿ ಸಿಲುಕಿತು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ (45) ಮತ್ತು ಸುರೇಶ್ ರೈನಾ (46) ಭರವಸೆ ಮೂಡಿಸಿದಾದ್ರು ಸ್ಪಿನ್ನರ್ಗಳ ಎದುರು ಮಂಕಾದ್ರು. ಇಲ್ಲಿಗೆ ಭಾರತದ ಸೋಲು ಖಚಿತವಾಗಿತ್ತು. ನಂತರ ಬಂದ ಧೋನಿ 37, ಹಾರ್ದಿಕ್ ಪಾಂಡ್ಯ 21 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಕೊನೆಯಲ್ಲಿ ಭಾರತ ನಿಗದಿತ ಓವರ್ನಲ್ಲಿ 236 ರನ್ ಗಳಿಸಿ ಆಲೌಟ್ ಆಯಿತು. ಆಂಗ್ಲರ ಪರ ಲಿಯಾಮ್ ಪ್ಲಂಕೆಟ್ 4 ವಿಕೆಟ್ ಪಡೆದು ಮಿಂಚಿದ್ರು.