ಹಜಾರಿಬಾಗ್, ಜು.15-ಒಂದೇ ಕುಟುಂಬದ ಆರು ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನ ಮನೆಯೊಂದರಲ್ಲಿ ನಿನ್ನೆ ನಡೆದಿದೆ.
ಐವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಆರನೆಯ ವ್ಯಕ್ತಿ ಮನೆ ತಾರಸಿಯಿಂದ ಕೆಳಗೆ ಜಿಗಿದು ಸಾವಿಗೆ ಶರಣಾಗಿದ್ದಾರೆ. ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಿಂದ ಆ ಪ್ರದೇಶದ ಜನ ಮಮ್ಮಲ ಮರುಗಿದ್ದಾರೆ.
ಮಹಾವೀರ್ ಮಹೇಶ್ವರಿ(70), ಅವರ ಪತ್ನಿ ಕಿರಣ್ ಮಹೇಶ್ವರಿ(65), ಮಗ ನರೇಶ್ ಅಗರ್‍ವಾಲ್(40), ಅವರ ಪತ್ನಿ ಪ್ರೀತಿ ಅಗರ್‍ವಾಲ್(38), ಮಕ್ಕಳಾದ ಅಮನ್(8) ಮತ್ತು ಅಂಜಲಿ (6) ಸಾವಿಗೆ ಶರಣಾದ ನತದೃಷ್ಟರು. ವಿಪರೀತ ಸಾಲ ಮಾಡಿಕೊಂಡಿದ್ದ ಈ ಮಾರವಾಡಿ ಕುಟುಂಬ ಸಾಲಿಗರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಈ ಘೋರ ಸಾವಿಗೆ ಇದೇ ಕಾರಣ ಎಂಬುದು ಡೆತ್‍ನೋಟ್‍ನಿಂದ ತಿಳಿದುಬಂದಿದೆ.
ಈ ಕುಟುಂಬ ಶುಷ್ಕ ಫಲಗಳನ್ನು(ಡ್ರೈ ಫ್ರೂಟ್ಸ್) ಮಾರಾಟ ಮಾಡುವ ಅಂಗಡಿ ಹೊಂದಿತ್ತು. ವ್ಯಾಪಾರ ನಷ್ಟ ಹಾಗೂ ಸಾಲದ ಸುಳಿಗೆ ಸಿಲುಕಿತ್ತು. ಅಲ್ಲದೇ ಇದೇ ವಿಷಯಕ್ಕಾಗಿ ಮನೆಯಲ್ಲಿ ಅಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಉನ್ನತ ಪೆÇಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






