ಬೆಂಗಳೂರು, ಜು.15- ಬಿಬಿಎಂಪಿ ಪೌರಕಾರ್”ುಕರ ವೇತನವನ್ನು ಇನ್ನೊಂದು ವಾರದೊಳಗೆ ಪಾವತಿ ಮಾಡಬೇಕೆಂದು ಆದೇಶ ಹೊರಡಿಸುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ವೇತನ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಿಬಿಎಂಪಿಯ ನೌಕರ ಸುಬ್ರಹ್ಮಣಿ ಅವರ ಮನೆಗೆ ಭೇಟಿ ನೀಡಿ 10 ಲಕ್ಷ ರೂ. ಪರಿಹಾರದ ಚೆಕ್ “ತರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸುಬ್ರಹ್ಮಣಿ ಅವರು ಗುತ್ತಿಗೆ ಪೌರಕಾರ್”ುಕರಾಗಿ ಕೆಲಸ ಮಾಡುತ್ತಿದ್ದರು. ಗುತ್ತಿಗೆದಾರರು ಆರು ತಿಂಗಳಿನಿಂದಲೂ ವೇತನವನ್ನು ಬಾಕಿ ಉಳಿಸಿಕೊಂಡಿದ್ದಾರೆ. ನಮ್ಮ “ಂದಿನ ಸರ್ಕಾರ ಗುತ್ತಿಗೆ ಅವಧಿಯನ್ನು ರದ್ದು ಮಾಡಿ ನೇರವಾಗಿ ಬಿಬಿಎಂಪಿುಂದಲೇ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಗುತ್ತಿಗೆ ಅವಧಿಯನ್ನು ಹಂತ ಹಂತವಾಗಿ ರದ್ದುಗೊಳಿಸಿ ಖಾಯಂ ನೌಕರರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಪೌರಕಾರ್”ುಕರಿಗೆ ಈ ವಾರದ ಒಳಗೆ ವೇತನ ಪಾವತಿಯಾಗಬೇಕು. ಯಾರೂ ಕೂಡ ವೇತನಕ್ಕಾಗಿ ಬಿಬಿಎಂಪಿಗೆ ಬರಬಾರದು ಎಂದು ಸ್ಪಷ್ಟ ಆದೇಶ ನೀಡಿದ್ದೇನೆ. ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದರು.
ಇಂತಿಷ್ಟೇ ಪೌರಕಾರ್”ುಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮ”ದೆ. ಆದರೆ, ಗುತ್ತಿಗೆದಾರರು ಅಗತ್ಯಕ್ಕಿಂತ ಹೆಚ್ಚಾಗಿ ನೌಕರರನ್ನು ನೇಮಕ ಮಾಡಿಕೊಳ್ಳುವುದರಿಂದ ಸಮಸ್ಯೆ ಉಂಟಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತೇವೆ. ಐದು ತಿಂಗಳಿನಿಂದ ವೇತನ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸುಬ್ರಹ್ಮಣಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ ಎಂದು ಹೇಳಿದರು.